ಪುಟ:ಚೆಲುವು.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುರಿದುಬಿದ್ದ ವೀರಕಲ್ಲು ನಿನ್ನ ಹೆಸರು ಏನು ವೀರ? ಮುನ್ನ ಯಾವ ಕಾಲದಲ್ಲಿ ಇನ್ನು ಯಾವ ಸಾಹಸದಲಿ, ಜೀವ ನನ್ನದಲ್ಲವೆಂದು ನೋವು ನನಗೆ ಸದರವೆಂದು ಸಾವದಾಡೆಯನ್ನು ಹೊಕ್ಕು, ಊರಜನದ ಮನವನುಲಿಸಿ ವೀರನಹುದು ಇವನು ಎನಿಸಿ ಯಾರ ಕಣ್ಣ ನೀರುಹರಿಸಿ ಅಮರನಾದೆಯೇ ? ಹಳ್ಳಿಯನ್ನು ದೋಚಬಂದ ಕಳ್ಳ ಪಡೆಯ ನುಗ್ಗಿ, ತರಗ ದಳ್ಳುರಿ ಗೆಲುವಂತೆ ಗೆಲಿದೆ; ಮೇವ ಮುಗಿಸಿ ಮನೆಗೆ ಬರುವ ಗೋವ ಹಿಡಿದ ಹುಲಿಯ ಸಂಜೆ ಜಾವದಲ್ಲಿ ಕಾದಿ ತಡೆದೆ ; ನಾಡಿನೊಡೆಯನಾಣತಿಯನು ಮಾಡಹೋಗಿ ಹಗೆಗೆ ಸಿಕ್ಕಿ ಹೇಡಿಯಾಗೆನೆಂದು ನುಡಿದೆ; ಎಂತು ಮಡಿದೆ ?