ಪುಟ:ಚೆಲುವು.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಮದುವೆಯಾದ ಹೆಣ್ಣು, ಸುಖದಿ ಬದುಕುವಂದು ಬೇರೆ ಜನದ ಎದುರು ಬಳಿಗೆ ಬಾರದವಳು, ನಿನಗದೇನೋ ಆಯಿತೆಂಬ ಜನದ ನುಡಿಯ ಕೇಳಿ, ತನ್ನ ಮನದಿ ನಡುಗಿ ಹೆದರಿ ಕರಗಿ, ದೇವ ಇವನನಿಂದು ಸಲಹು ಜೀವವುಳಿಯೆ ಒಂದು ವರುಷ ದೀವಟಿಗೆಯ ಹಿಡಿವ ನಿನಗೆ, ಎಂದು ಬೇಡುತ ; ಚಾಣೆ ಮಗುವನೆತ್ತಿಕೊಂಡು ನಾಣ ಮರೆತು ಓಡಿಬಂದು, ಪ್ರಾಣ ಹೋಹ ಸಮಯದಲ್ಲಿ ನಿನ್ನ ತಲೆಯ ಮಡಿಲೊಳಿಟ್ಟು, ಕಣ್ಣ ನೀರನೊರಸಿಕೊಳುತ್ತ, ನನ್ನ ಬಿಟ್ಟು ಹೋಹರುಂಟೆ ? ನನ್ನ ಮಾತು ಇರಲಿ, ಇಕೊ, ನಿನ್ನ ಮಗನ ನೋಡಿ ಬದುಕು, ಕುನ್ನಿ ಕರೆಯುತ್ತಾನೆ, ನೋಡು, ಎಂದುಸಿರ್ದಳು.