ಪುಟ:ಚೆಲುವು.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಪಾಪಿ ನಾನೆಂದು ಕೋಪ ಮಾಡದಿರು ; ಜನತೆಯೆಲ್ಲ ನನ್ನ ಜನ ನನಗೆ; ಭಿನ್ನ ವೆಂದೆಣಿಕೆ ಮನದೊಳಿಲ್ಲ. ಯಾವೊಂದು ಜೀವ ನೋವಿನಲಿ ಸಿಲುಕೆ, - ಸಿಲುಕಿ ನಾನೂ | ನೋವಿನಲಿ ನೋವೆ, ಸಾವಿನಲಿ ಸಾವೆ, ಅಳಲೆ ಅಳುವೆ. ನಿಮ್ಮವರ ಕಯ್ಯ ಅನ್ನವನು ಕಿತ್ತು ನನ್ನ ಜನಕೆ ಕೊಟ್ಟೆನೆಂದೆಣಿಸಿ ಸಿಟ್ಟು ಮಾಡದಿರು ಅಣ್ಣ ಕೇಳು ; ಹಾಲಿಲ್ಲವೆಂದು ಗೋಳು ಮಾಡುವರು ತಿರುಗಿ ನೋಡಿ; ಅಂಬಲಿಯ ಬಯಸಿ ಹಂಬಲಲಿ ಮಡಿವ ನರಕ್ರಿಮಿಗಳ. ೨೨