ಪುಟ:ಚೆಲುವು.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ನನ್ನ ಜನ ನಿಮ್ಮ ಬನ್ನ ಬಡಿಸಿದೊಡೆ, ಆಗ ಇಂತೆ ಮೊರೆದು ಹೇಳುವೆನು ಕರೆದು ಬೇಡುವೆನು, ಕೂಗಿ, ಕರೆದು. ನಿನ್ನಲ್ಲಿ ನಾನು, ನನ್ನಲ್ಲಿ ನೀನು, ಗುರುವ ಕಂಡು ನಡೆಯುವುದೆ ಚೆಂದ; ನಡೆಯದಿರೆ ಬಾಳು ಬರಿದು, ಭಂಡು. ಮಾನವನ ಬಾಳು ಕಾಣುವನ ಮನಕೆ ತಾಳೆ ಹೂವು ; ಅರಿತು ಮುಡಿ ಗಂಧ, ಮರೆತು ಹಿಡಿ ಮುಳ್ಳು; ಬಾಳು ಇಂತೆ. ಕುತ್ತೆ ನೀನೆನ್ನ, ಸತ್ಯ ಸಾಯುವದೆ? ನಿನ್ನ ಕೃತಿಯ ಗೊಬ್ಬರವನುಂಡು ಹಬ್ಬದೇ ಮುಂದೆ ೨೪