ಪುಟ:ಚೆಲುವು.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೆನ್ನೈದಿಲೆ ಜೋಗವನು ನೋಳ್ಳುದಕೆ ಹೋಗುತಿರೆ ನಾನಂದು ಮಲೆಯ ನಡುವಣ ಕರಿಯ ನೀರಹರಹ ದೂರದ ಉಪಾಂತದಿಂ ಸಾರಿ ನಿನ್ನಯ ಕಾಂತಿ ಹೊಳೆ ಹರಿದು ನನ್ನ ಕಣ್ಣನು ತುಂಬಿತು. ನೀಲ ಜಲದಿಂದೆದ್ದು ನವದೆದೆಯ ತಿವಿದು ಅಲಗಂತೆ ನಿಂತೆ ನೈದಿಲೆ ಜಯವ ಸವಿದು. ಎಂಥ ಕೆಂಪಿದು, ಎ, ಇಂತುಂವೆ ಲೋಕದಲಿ, ಎಂದು ಮೋಹಿಸಿ ಕಣ್ಣು ಸಿಟ್ಟಿಸಿರಲು, ಮಲೆಯಿಲ್ಲ, ಮರವಿಲ್ಲ, ಜಲವಿಲ್ಲ, ವನವಿಲ್ಲ, ನಾನಿಲ್ಲ; ಉಳಿದೆ ನೈದಿಲೆಯೊರ್ವ ನೀ, ಎನ್ನಾ ತವಾಕ್ಷಣದಿ ನಿನ್ನಲ್ಲಿ ಕೆತ್ತು ತನ್ನ ಮರೆದುದು ; ಶೂನ್ಯವಾಯಿತಾ ಸುತ್ತು. ಇಲ್ಲ; ಶೂನ್ಯವಲ್ಲ; ಎಲ್ಲವನ ನನ್ನಂತೆ ತಾ ಬಗೆದ ಸೊಗಸು ರೂಪಾಂತುದೆಂದು ನಿನ್ನ ನೋಡುವ ಭರದಿ ತನ್ನ ಮರೆದುದು ತಾನು ಕೆನ್ನ ದೀಧಿತಿಯ ಹೊಳೆಯಲ್ಲಿ ಮಿಂದು ; ಮನೆ ಮಾತ್ರ ಮರೆಯಿಸುವ ಸತಿಯ ನಗೆಯಂತೆ, ಬಾನ ಮರೆಯಿಸುವ ರವಿಯಂತೆ ನೀನಿಂತೆ.