ಪುಟ:ಚೆಲುವು.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಅಲ್ಲದೆ ಆ ಮೊದಲ ಕೃತಿಯ ನೋಡಿ ಕೋಪದಿಂದ ಕೆಲರು, ಬಲ್ಲ ಮಂದಿ, ಏತರದಿದು ಕಾಡು ಕಏತೆಯೆಂದರಹುದು. ಇಷ್ಟು ಬೇಗ ಮರಳಿ ನಿನ್ನ ಚರಿತೆಯೊರೆದು, ನಾಯಿಮರಿ, ಶಿಷ್ಯರನ್ನು ನೋಯಿಸುವುದು ತರವೆ ನಮಗೆ ಹೇಳು, ಕರಿ? ಕೆಲವು ಕಾಲ ತಾಳು ಬಾಳು ; ಪಾರಿವಾಳ ಕೋಳಿ, ಬೇಡ, ಅಳಿಲು ಒಂದ ಹಿಡಿದೊ ತಿಂದೊ, ವೀರನೆಂದು ಹೆಸರಪಡೆ ; ವರುಷವೆರಡೂ ಮರೊ ಹರಿದು ಹುಡುಗುತನ ಸ್ವಲ್ಪ ಬಿಡಲಿ; ಕರುಮವಿನಿತು ಸವೆದು ನಿನ್ನ ನಡೆಗೆ ಸ್ವಲ್ಪ ನೀತಿ ಬರಲಿ.