ಪುಟ:ಚೋರಚಕ್ರವರ್ತಿ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

22 ಪವಾದ ಸಂಶಯಕ್ಕೆ ಕಾರಣವಿರುವುದು, ನಿನ್ನ ಭಾವವನ್ನು ನೋ। ಡಿದರೆ, ನೀನು ರಾಮರತ್ನನನ್ನು ಮುಚ್ಚುಮರೆ ಮಾಡಬೇಕೆಂದಿರುವು ದಾಗಿ ಕಾಣುವುದು. ಶತಿ, ಈಗಲಾದರೂ ಖಂಡಿತವಾಗಿ ಹೇಳು, ಈ ಕಳವಿನ ವಿಚಾರದಲ್ಲಿ ನಿನಗೆ ಕೊಂಚ ತೂ ಗೊತ್ತಿಲ್ಲವೋ ? ಈ ಮಾತನ್ನು ಕೇಳಿ ಶಶಿರೇಖೆಯ ಮುಖವು ಬಾಡಿತು, ಕಂಠ ಸ್ವರವು ರುದ್ದವಾಯಿತು, ಕಣ್ಣುಗಳಲ್ಲಿ ನೀರು ತುಂಬಿತು, ತಲೆಯು ಬಾಗಿತು. ಆಕೆಯ ಶರೀರವೆಲ್ಲವೂ ನಡುಗಲಾರಂಭಿಸಿತು. ಅರಿಂ ದವನು ಇದನ್ನು ನೋಡಿ, ಪೂರ್ವದಂತೆಯೇ ಮತ್ತೆ ಪ್ರಶ್ನೆ ಮಾಡಿ ದನು. ಅದಕ್ಕೆ ಶಶಿರೇಖೆಯು ಮೆಲ್ಲಮೆಲ್ಲನೆ-ನಾನು ಅದೆಲ್ಲವನ್ನೂ ಕೇಳಿರುವೆನು. ರಾಮನನ್ನು ಮರೆಮಾಡಲು ನಾನು ಯತ್ನಮಾ ಡಿದ್ದುಂಟು. ತಾವು ಆತನನ್ನು ದಸ್ತಗಿರಿ ಮಾಡುವಿರೆಂಬ ಭಯದಿಂದ ನಾನು ಹೀಗೆಲ್ಲ ಮಾಡಿದೆನು. ಆತನು ನನ್ನಲ್ಲಿ ಪ್ರಮಾಣವಾಗಿ ಹೇಳಿ ರುವುದರಿಂದ ಆತನು ನಿರ್ದೋಷಿಯೆಂದು ನಾನು ದೃಢವಾಗಿಯ ನಂಬಿರುವೆನು. ಆತನು ನನ್ನಲ್ಲಿ ಯಾವಾಗಲೂ ಸುಳ್ಳು ಹೇಳಿದವ ನಲ್ಲ, ಎಂದಳು. ಅರಿಂದಮನು ಶತಿಯ ಮಾತನ್ನು ಕೇಳಿ ಆಶ್ಚ ಪಟ್ಟನು. ಚಿರಕಾಲ ಜನರ ಸ್ವಭಾವವನ್ನು ಪರೀಕ್ಷಿಸಿ ತಿಳಿದು ಕೊಂಡಿದ್ದರೂ, ಅರಿಂದಮನಿಗೆ ಶಶಿಯು ಹೇಳುವುದು ನಿಜವೋ ಸುಳ್ಳೋ ಎಂಬುದಾ ವುದೂ ಗೊತ್ತಾಗದೇ ಹೋಯಿತು. : ಚತುರಸ್ತ್ರೀಯರ ಹೃದಯದ ಆಳವನ್ನು ಬಲ್ಲವರಾರು? ಪ್ರೀತಿಯೆಂಬುದು ದೋಷವನ್ನೇ ಮುಚ್ಚು ವುದು, ಇಂದಿರೆಯು ಪ್ರೀತಿಯಿಂದ ಶರಚ್ಚಂದ್ರನನ್ನು ನಿರ್ದೋಪಿ ಯೆಂದು ಸಾಧಿಸಿದಳು ; ಶಶಿರೇಖೆಯೂ ಅದೇ ಪ್ರೀತಿಯಿಂದ ರಾಮು ರತ್ನನನ್ನು ನಿರ್ದೋಷಿಯೆಂದು ಸಾಧಿಸುತ್ತಿರುವಳು. ಈ ಅನಿರ್ವ ಚನೀಯವಾದ ತತ್ತ್ವದ ಆಂತವನ್ನು ನೋಡಿದರೆ, ಇದರಲ್ಲಿ ಆವು