ಪುಟ:ಚೋರಚಕ್ರವರ್ತಿ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೋ ನಿಜವಾದ ಅಂಶವು ಇದ್ದೆ ಇರಬೇಕು, ಅದು ಪ್ರಮಾಣಾಂ ತರಗಳಿಂದ ಸ್ಥಿರಪಡುವುದು ' ಎಂದು ಅರಿಂದಮನು ಬಹಳ ಹೊತ್ತು ಚಿಂತಾಸಾಗರದಲ್ಲಿ ತೇಲಿಮುಳುಗುತಿದ್ದನು. ಐದನೆಯ ಅಧ್ಯಾಯ. ಅರಿಂದಮನು ಚಿರಕಾಲ ಯೋಚಿಸುತ್ತಿದ್ದು ನೋಡು, ಸಿ ರ್ದೋಷಿಯಾದವನಿಗೆ ಶಿಕ್ಷೆ ಮಾಡಬೇಕೆಂಬುದಾಗಲಿ, ಅಥವಾ ಒಬ್ಬನ ತಪ್ಪಿಗಾಗಿ ಮತ್ತೊಬ್ಬನನ್ನು ಶಿಕ್ಷಿಸಬೇಕೆಂದಾಗಲಿ ನನ್ನ ಇಪ್ಪವಲ್ಲ, ಎಂದನು. ಶಶಿರೇಖಾ_ತಮ್ಮ ಮಾತನ್ನು ಕೇಳಿದರೆ, ತಾವು ಇತರ ಪೊಲೀ ಸಿನವರಂತೆ ಕಠಿಣರಲ್ಲವೆಂದು ತೋರುತ್ತದೆ. ತಮ್ಮಲ್ಲಿ ದಯಾ ರಸವು ಪೂರ್ಣವಾಗಿದೆಯೆಂದು ಭಾವಿಸಿ, ರಾಮರತ್ನನನ್ನು ನಿರ್ದೊ ಪ್ರಿಯನ್ನಾಗಿ ಮಾಡಬೇಕೆಂದು ಪ್ರಾರ್ಥಿಸುವೆನು. ಆತನು ಸಿ-ಪರಾಧಿ ಯೆಂದು ನನಗೆ ಭರವಸೆಯುಂಟು. ಅಪರಾಧವು ತನ್ನ ತಲೆಯ ಮೇಲೆ ಎಲ್ಲಿ ವಾಲುವುದೋ ಎಂದು ಭಯದಿಂದ ಆತನು ತಲೆಯನ್ನು ತಪ್ಪಿಸಿಕೊಂಡು ತಿರುಗುತ್ತಿರುವನು. ಅರಿಂದಮ-ಆತನು ನಿರಪರಾಧಿಯೆಂದು ದೃಢವಾಗಿಯೂ ತಿಳಿ ದಿರುವುದಾದರೆ, ಹೀಗೆ ಭಯಪಡಲು ಕಾರಣವೆಸಿರುವುದು ? ನಿರ್ದೋಷಿಗೆ ಯಾವ ಭಯವೂ ಇರುವುದಿಲ್ಲವ, ಅಂತಹವನು ನಡೆದ ಸಂಗತಿಯನ್ನು ನಡೆದಹಾಗೆ ಏತಕೆ ಬಹಿರಂಗಪಡಿಸಬಾರದು ? ಶಶಿರೇಖಾ-ಅದರ ಮರ್ಮವೇನೋ ನನಗೆ ತಿಳಿಯದು. ಆತನು ಪ್ರಕಾಶಪಡಿಸುವುದಕ್ಕೆ ಮತ್ತಾವ ಅಡಚನೆಯಿರುವುದೊ, ಅದು ಮಾತ್ರ ನನಗೆ ಗೊತ್ತಿಲ್ಲ. ಆತನು ಎಲ್ಲವನ್ನೂ ತಿಳಿಸುವುದಾ