ಪುಟ:ಚೋರಚಕ್ರವರ್ತಿ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

32 ರಾಮ-ತನ ಮುಖವು ವಿವರ್ಣವಾಯಿತು, ಬಾಯಿ ಒಣಗಿ ಹೋಯಿತು, ಬಾಯಿಂದ ಮಾತೇ ಹೊರಡಲಿಲ್ಲ. ಇದನ್ನು ನೋಡಿ ಅರಿಂದಮನು ಮತ್ತೆ ಅದೇ ಪ್ರಶ್ನೆಯನ್ನು ಮಾಡಿದನು. ರಾಮ-(ಕಂಪಿತಸ್ಸ ದಿಂದ) ಈ ಕಾಗದವು ತಮಗೆ ಎಲ್ಲಿ ಸಿಕ್ಕಿತು ? ಅರಿಂದಮಈ ಮನೆಯ ಬಾಗಿಲಿನಲ್ಲಿ. ರಾವು-ಯಾರು ಬೀಸಾಡಿದ್ದರೆ ನಿನಗೇನು ಗೊತ್ತು ? ಅರಿಂದಮ-(ಉಚ್ಛಸ್ಸರದಿಂದ ನಿಮಗೆ ಗೊತ್ತಿಲ್ಲವೇ ? ನಿಮ್ಮ ಜೇಪಿನಿಂದಲೇ ಇದು ಕೆಳಗೆ ಬರುವುದೆಂಬುದನ್ನು ನೀವು ಒಪ್ಪುವುದಿಲ್ಲವ ? ರಾವುತಾವು ಈರೀತಿಯಲ್ಲಿ ಸಂದೇಹಪಡಲು ಕಾರಣ ವೇನು ? ಅರಿಂದಮ-ತಾವು, ತಮ್ಮ ಯಜಮಾನರು, ಶ ಶೃ೦ದ್ರ, ಇವು ಹೊರತಾಗಿ ಮತ್ತಾರಿಗೂ ಈ ಕಾಗದದ ಸಂಗತಿಯು ಗೊ ತಿಲ್ಲ. ನಿನ್ನನ್ನು ಬಿಟ್ಟರೆ, ಈ ಮನೆಗೆ ಅವರಿಲ್ಲಿ ಮತ್ತಾರು ಬರುವರು ? - ರಾಮರತ್ನನು ಸುಮ್ಮನಿದ್ದು ಬಿಟ್ಟನು. ಅರಿಂದಮನುನೀವು ಸತ್ಯವಾಗಿ ಹೇಳಿರಿ, ಅದರಿಂದ ನಿಮಗೆ ಒಳ್ಳೆಯದಾಗುವುದು, ಎಂದು ಹೇಳಿದ್ದನ್ನು ಕೇಳಿ, ರಾಮರತ್ನನ ತಲೆಯನ್ನು ಬಗ್ಗಿಸಿ ಕೊಂಡು ಮೆಲ್ಲಮೆಲ್ಲನೆ-ಈ ಕಾಗದವು ನನ್ನ ಜೀಪಿನಿಂದಲೇ ಕೆಳಗೆ ಬಿದ್ದಿತು, ಎಂದನು. ಶಶಿರೇಖೆಯು ಈ ಮಾತನ್ನು ಕೇಳಿ ಕೋಪವ್ಯಂಜಕವಾದ ನೋಟದಿಂದ ರಾಮರತ್ನನನ್ನು ನೋಡಿದಳು. ಅರಿಂದಮನು-ಈ