ಪುಟ:ಚೋರಚಕ್ರವರ್ತಿ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

39 ಮತ್ತಾವ ಸಂಗತಿಯ ನನಗೆ ಗೊತ್ತಿಲ್ಲ. ನಾನು ಯಾರ ವಿನಾಶ ಕ್ಯ ಬದ್ಧ ಕಂಕಣನಲ್ಲ. - ಅರಿಂದಮ-ರಾಮರತ್ನ ಮಹಾಶಯ ! ನಾನು ತಮ್ಮಿಂದ ಕೇಳಿ ತಿಳಿಯಬೇಕೆಂದಿದ್ದು ದನ್ನು ತಿಳಿದಿದ್ದಾಯಿತು, ತಮಗೆ ನಾನು ಮತ್ತಾವ ವಿಧವಾದ ತೊಂದರೆಯನ್ನೂ ಕೊಡಲಾರೆನು. ತಾವು ಅಪ ರಾಧಿಯೆಂಬ ಸಂಶಯವು ಈಗ ದೂರ ತೊಲಗಿತು, ತಾವು ಇನ್ನು ಯಾವುದಕ್ಕೂ ಹೆದರಬೇಕಾದುದಿಲ್ಲ, ನೀವು ಎಂದಿನಂತೆ ನಿಶ್ಚಿಂತ ರಾಗಿರಬಹುದು, ಆದರೆ ತಾವು ನನಗೆ ಪ್ರತಿಜ್ಞೆ ಮಾಡಿಕೊಡಬೇ ಕಾದ್ದೆನೆಂದರೆ-ನಾನು ಮತ್ತಾವಾಗಲಾದರೂ ಈ ವಿಧವಾದ ಪ್ರಶ್ನೆ ಯನ್ನು ಮಾಡಿದರೆ, ಅದಕ್ಕೆ ಇದೇ ರೀತಿಯಲ್ಲಿ ಉತ್ತರ ಕೊಡ ಬೇಕು. ರಾಮನಾನದಂತೆಯೇ ಪ್ರತಿಜ್ಞೆ ಮಾಡುವೆನು. ಅರಿಂದಮ-ಮತ್ತೊಂದು ವಿಷಯ, ನಾನು ತಮ್ಮಲ್ಲಿಗೆ ಒಂದು ಮೇಲ್ಕಂಡಂತೆ ಜಿಜ್ಞಾಸೆ ಮಾಡಿದ್ದನ್ನು ತಾವು ಮತ್ತಾರ ಮುಂದೂ ಹೇಳಕೂಡದು, ಒಂದುವೇಳೆ ಹೇಳುವುದಾದರೆ ನನ್ನ ಕೆಲಸವೆಲ್ಲವೂ ಕೆಟ್ಟು ಹೋಗುವ ಸಂಭವವುಂಟು. ರಾಮು-ಅದರಂತೆಯೇ ನಡೆದುಕೊಳ್ಳುವೆನು. - ಅರಿಂದಮ-ನಾನು ತಮ್ಮಿಂದ ಅಪ್ಪಣೆಯನ್ನು ತೆಗೆದುಕೊಂ ಡು ಹೋಗುವುದಕ್ಕೆ ಮುಂಚೆ, ತಾವು ಮಾತ್ರ ಯಾವ ಕಾರಣದಿಂ ದಲೂ ತಾರಾಮೀತನೊಡನೆ ಯಾವ ಮಾತನ್ನೂ ಆಡಕೋಡದೆಂದು ಕೇಳಿಕೊಳ್ಳುವೆನು. ತಮಗೆ ತೊಂದರೆಯುಂಟಾಗದಂತೆ ನೋಡಿ ಕೆಳ್ಳುವ ಭಾರ ನನ್ನದಾಗಿರುವುದು. - ಅರಿಂದಮನು ಈ ರೀತಿಯಲ್ಲಿ ಕಟ್ಟುಮಾಡಿ ಅಲ್ಲಿಂದ ಮುಂ ದಕ್ಕೆ ತೆ ಳಿದನು. ಹೊರಗಡೆ ಶಶಿರೇಖೆಯು ಕಾದಿರಲು, ಆಕೆಗೆ