ಪುಟ:ಚೋರಚಕ್ರವರ್ತಿ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

40 ಸಂಕ್ಷೇಪವಾಗಿ ನಡೆದ ಸಂಗತಿಗಳೆಲ್ಲವನ್ನೂ ಹೇಳಿ, ಅರಿಂದವನು ಆ ಮನೆಯಿಂದ ಹೊರಗೆ ಹೊರಟುಹೋದನು. ಹತ್ತನೆಯ ಅಧ್ಯಾಯ. ಜಾತಕ ಮಹಾಶಯರೆ ! ಹಿಂದಿನ ಅಧ್ಯಾಯದಲ್ಲಿ ಅರಿಂದಮು ನಿಗೂ ರಾಮರತ್ನನಿಗೂ ನಡೆದ ಸಂಭಾಷಣೆಯನ್ನು ತಾವು ಓದೋ? ಣವಾಯಿತು. ಅರಿಂದಮನು ರಾಮರತ್ನನ ಮಾತನ್ನು ಸತ್ಯವೆಂದು ನಂಬಿ ಅವನಿಗೆ ಅಭಯವನ್ನು ಕೊಟ್ಟು ಹೊರಟುಹೋದನು, ಅಭಿ ಜ್ಞನಾದ ಅರಿಂದಮನು ಈ ರೀತಿಯಾಗಿ ಮಾಡಿದುದು ಯುಕ್ತವೆ? ತನ್ನನ್ನು ತಾನೇ ನಂಬದ ಮನುಷ್ಯನು ಇತರರನ್ನು ಈ ರೀತಿಯಲ್ಲಿ ನಂಬುವುದು ಯುಕ್ತವಾದುದೆಂದು ಯಾರುತಾನೇ ಹೇಳಬಲ್ಲರು. ಅಥವಾ ರಾಮರನಿಗೆ ಪ್ರಚನೆಯನ್ನುಂಟುಮಾಡುವುದಕ್ಕಾಗಿ ಅರಿಂದಮನು ಹೀಗೆ ಪ್ರವರ್ತಿಸಿರುವನೆ ? ಇದ್ದ ನೋ ಇರಬಹುದು. ಸತ್ತೇದಾರನಾದವನು ಬಗೆಬಗೆಯ ಜನರೊಡನೆ ಸಹವಾಸ ಮಾತ ಬೇಕಾಗಿರುವುದು, ಬಗೆಬಗೆಯ ಜನರ ಮನೋಭಿಪ್ರಾಯಗಳು ಬಗೆಬಗೆಯಾಗಿರುವುದರಿಂದ, ಕಾಸರನಾದವನು ಇತರರಿಗೆ ಅವಿ ರೋಧವಾಗಿ ನಡೆಯುತ್ತಿದ್ದು ತನ್ನ ಕಾವ್ಯವನ್ನು ಸಾಧಿಸಿಕೊಳ್ಳು ವನು. ಜನರ ಇಚ್ಛಾನುಸಾರವಾಗಿ ನಡೆದುಕೊಳ್ಳುತ್ತಾ, ತನ್ನ ಉದ್ದೇಶವನ್ನು ನಾಶಪಡಿಸಿಕೊಳ್ಳದಿರತಕ್ಕವನೇ ಈ ಲೋಕದಲ್ಲಿ ಧನ್ಯನು. ಅನೇಕರ ಸ್ವಭಾವವುಇದಕ್ಕೆ ವಿಪರೀತವಾಗಿಯೇ ಕಂ ಡುಬರುವುದು, ಅಂತಹವರು ಚರಿತ್ರೆಯಲ್ಲಿ ಅಂಕಿತರಾಗುವುದಕ್ಕೆ ಯೋಗರಾಗರು.