ಪುಟ:ಚೋರಚಕ್ರವರ್ತಿ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

42 ಜೀಮತ-ಆತನಿಲ್ಲಿಗೆ ಬರಲಿಲ್ಲ. ಅರಿಂದಮ-ಆತನನ್ನು ತಾವು ಬಲ್ಲಿರಾ ? ಜೀವತ_ಗೊತ್ತಿಲ್ಲದೇ ಏನು ! ಐದುಸಾವಿರ ರೂಪಾಯಿ ಅರಿಂದಮು_ಆತನಿಂದ ತಮಗೆ ಬರಬೇಕಾದುದೇ ? ಜಿಮೂತ_ಹುದು, ಆತನು ಬೇಗನೆ ಸಾಲವನ್ನು ತಿರಿಸ ಬಲ್ಲವನಾಗಿರುವನು. ಅರಿಂದಮ-ಐದುಸಾವಿರ ರೂಪಾಯಿ ! ಎದೆ ಒಡೆದುಹೋ। ಗುವುದು. ಜೀಮತ-ಒಬ್ಬನಾದರೆ ಎದೆಯೊಡೆಯುವುದೇ ನಿಜ. ಅರಿಂದಮಆತನ ಜತೆಗೆ ಮತ್ತಾರಿವರು ? ಜೀಮೂತ-ರಾಮರತ್ನನೆಂಬೊಬ್ಬನಿರುವನು; ಇವರಿಬ್ಬರೂ ಸೇರಿ ಹಣವನ್ನು ತೀರಿಸಬೆಕು. ಅರಿಂದಮ-ರಾಮರತ್ನ ! ಅಮನಾಥನ ಬಳಿಯಲ್ಲಿ ಒಬ್ಬ ಸಾಮಾನ್ಸನಾದ ಗುಮಾಸ್ತನಾಗಿರುವನಲ್ಲವೇ ? ಜೀವತ-ಆದರೇನು ? ಪ್ರತಿನಿತ್ಯವೂ ಆತನು ಎಷ್ಟು ಹಣ ವನ್ನು ಚಲಾವಣೆ ಮಾಡುವನೆಂಬುದು ನಿಮಗೆ ಗೊತ್ತೆ ? ಆತನು ಹಣವನ್ನು ತೀರಿಸಲಾರನೆಂಬ ಭಯವೇನೂ ನನಗಿಲ್ಲ. ಅರಿಂದಮ-ಏನು ? ರಾಮರತ್ನನು ಅಮರನಾಥನ ಸನ್ನ ವನ್ನೂ ಹಾಳುಮಾಡುವುದರಲ್ಲಿ ಉದ್ದುಕನಾಗಿರುವನೇ ? ಜಿಮತಹಾಗೆ ಹೇಳಲು ನಾನು ಇಷ್ಟಪಡುವುದಿಲ್ಲ. ಅರಿಂದಮನು ಈ ಮಾತನ್ನು ಕೇಳಿ ವಿಸ್ಮಿತನಾಗಲು, ಜಿ. ತನು ಆತನನ್ನು ನೋಡಿ ವೇಷಧಾರಿಯಾದ ಪತ್ತೇದಾರನಿರಬ ಹುದೆಂದು ಸಂಶಯಗ್ರಸ್ತನಾಗಿ ಮುಂದೆ ಯಾವ ಮಾತನ್ನೂ ಆಡದೆ ಸುಮ್ಮನಾದನು. ಅರಿಂದಮನು ಇವನ ಮನೋಭಾವವನ್ನರಿತು