ಪುಟ:ಚೋರಚಕ್ರವರ್ತಿ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಳಿ ಅಮರ-ಹಾಗಾದರೆ ಆ ಹಣದಲ್ಲಿ ನಮ್ಮ ದೀನೇಂದ್ರ ಚಂದ್ರಮಹಾಶಯರಿಗೆ ಇಪ್ಪತ್ತು ಸಾವಿರ ರೂಪಾಯಿಗಳ ನ್ನು ಕೊಡು. ಗುಮಾಸ್ತ ನು ಯಜಮಾನನ ಅಪ್ಪಣೆಯ ಪ್ರಕಾರ ಕಬ್ಬಿಣದ ಪೆಟ್ಟಿಗೆಯಿಂದ ಇಪ್ಪತ್ತು ಸಾವಿರ ರೂಪಾಯಿಗ ಳನ್ನು ತೆಗೆಯುವುದಕ್ಕೆ ಹೋದನು. ಆತನು ಕೊಂಚ ಹೊ ತಿನಮೇಲೆ ಹಿಂದಿರುಗಿ ಯಜಮಾನನ ಹತ್ತಿರ ಬಂದಾಗ, ಅ ವನ ಮುಖವು ಬಾಡಿದ್ದಿ ತು, ಕಾಂತಿಯು ಕಳೆಗುಂದಿದ್ದಿತು, ಹಸ್ತವು ಶತೃವಾಗಿದ್ದಿತು ಅವರನು ಇದನ್ನು ನೋಡಿ-ಹಣ ವನ್ನು ತರಲಿಲ್ಲವೇಕೆ? ಎಂದು ಕೇಳಿದನು " ಗುಮಾಸ್ತ-ಕಬ್ಬಿಣದ ಪೆಟ್ಟಿಗೆಯಲ್ಲಿ ಒಂದು ಕಾಸೂ ಇಲ್ಲ. ಅವರ-(ವಿಸ್ಮಿತನಾಗಿ) ಹಾಗೆಂದರೇನು? ಮೋಹಿನೀ ಕುಮಾರನು ತಂದುಕೊಟ್ಟ ಹಣವು ಇಷ್ಟು ಬೇಗ ಏನಾಯಿ ತು, ನೀನು ಮರೆತು ಮತ್ತೆಲ್ಲಿಯಾದರೂ ಇಟ್ಟಿರಬಹುದು ಹುಡುಕು ಹುಡುಕು. ಇಷ್ಟು ಜಾಗ್ರತೆಯಾಗಿ ಅಷ್ಟು ಹಣವು ಕೈಬಿಟ್ಟು ಹೋಗುವುದೆಂದರೇನು. ಗುಮಾಸ್ತೆ-ನಾನು ಎಲ್ಲವನ್ನೂ ಹುಡುಕಿನೋಡಿದೆನು ದಯೆಯಿಟ್ಟು ತಾವು ಬಂದು ನೋಡಬೇಕು, ನನಗಾದರೋ ದಿಕ್ಕೇ ತೋರದಂತಾಗಿದೆ. ಅಮರನಾಥನು ಏಕಕಾಲದಲ್ಲಿಯೇ ಸಹಸ್ರಾರು ಸಿಡಿ ಲು ಬಡಿದಂತವನಾಗಿ ಹಣದ ಕೋಣೆಯೊಳಗೆ ಪ್ರವೇಶ ಮಾಡಿದನು. ಗುಮಾಸ್ಯನೂ ಅವನ ಹಿಂದೆ ಹಿಂದೆಯೇ ಹ ದನು, ಅವರನು ಎಲ್ಲವನ್ನೂ ಹುಡುಕಿನೋಡಿದನು. .