ಪುಟ:ಚೋರಚಕ್ರವರ್ತಿ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಮರ-ಯಾವ ಸಂಗತಿಯನ್ನೂ ಬಹಿರಂಗಪಡಿಸ ಕೂಡದೆಂದು ನಾನು ಅಪ್ಪಣೆ ಮಾಡಿದ್ದನು - ಅರಿಂದಮಅದಿರಬಹುದು, ಪತ್ತೆದಾರನು ಕೆಲಸ ವನ್ನು ಕೈಗೊಳ್ಳುವುದಕ್ಕೆ ಮುಂಚೆ, ಇತರರ ಕಡೆಯಿಂದ ಎಷ್ಟು ಸಾಧ್ಯವೋ ಅಷ್ಟು ಸಂಗತಿಗಳನ್ನು ತಿಳಿಯಲು ಯ ತೃಮಾಡು ನು, ಇದು ಪತ್ತೇದಾರರ ಸ್ವಭಾವವೇ ಸರಿ. ಅದಕ್ಕಾಗಿ ತಾವು ಚಾಕರನ ಮೇಲೆ ಕೋಪಮಾಡಕೂಡದು. ಅಮರನನ್ನ ಮನೆಯಲ್ಲಿ ನಡೆದ ಅನರ್ಥವು ಲೋಕ ದಲ್ಲೆಲ್ಲಾ ಹರಡಕೂಡದೆಂಬುದೇ ನನ್ನ ಉದ್ದೇಶ ಆದ್ದರಿಂ ದಲೇ ಬಹಿರಂಗ ವಡಕೂಡದೆಂದು ನಾನು ಚಾಕನಿಗೆ ಅಪ್ಪಣೆವಾಡಿದ್ದೆನು. ತಮಗೆ ತಿಳಿ : ದ್ದರಿಂದ ಅಪರಾಧವೆಂದು ನನ್ನ ಅಭಿಪ್ರಾಯವಲ್ಲ. ತಮಗೆ ೬೪ಸದೇ ನಾವು ಏನು ಕೆ ಲಸಮಾಡುವುದಕ್ಕಾದೀತು ? ಅರಿಂದಮ-ತಮ್ಮ ಕೆಲಸವೆಲ್ಲವೂ ಗೋಪ್ಯವಾಗಿ ಯೇ ನಡೆವುದು, ಆ ವಿಷಯದಲ್ಲಿ ತಾವು ಯೋಚಿಸಕೆಲಸವಿಲ್ಲ. ಎಂಟನೆಯ ಅಧ್ಯಾಯ. ಅನಂತರ ಅಮರನಾಥನು ನಡೆದ ಸಂಗತಿಯೆಲ್ಲವನ್ನೂ ಆಮೂಲಾಗ್ರವಾಗಿ ವಿವರಿಸಿದನು, ನಮ್ಮ ನಿಯಪಾಠಕ ಮಹಾಶಯರು ಎಲ್ಲವನ್ನೂ ಬಲ್ಲವರಾದ್ದರಿಂದ ಪುನಃ ಅದನ್ನು ನಾವಿಲ್ಲಿ ವಿವರಿಸಬೇಕಾದುದಿಲ್ಲ. ಅಮರನಾಥನು ತನ್ನ ವೃತ್ತಾಂತವನ್ನು ಎಲ್ಲಿನವರೆಗೂ ಹೇಳುತ್ತಾನೋ?, ಅಲ್ಲಿನವರೆಗೂ ಅರಿಂ ಚವನು ಆದರದಿಂದ