ಪುಟ:ಚೋರಚಕ್ರವರ್ತಿ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಟ ಅನಂತರ ಅರಿಂದಮನು ಅಮರನ ಕಡೆಗೆ ತಿರುಗಿ ಆಂ ತೆಂದನು-ನಾನು ತಮ್ಮಲ್ಲಿ ಒಂದೆರಡು ಪ್ರಶ್ನೆ ಮಾಡಬೇಕೆಂದು ಇಚ್ಚಿಸುವೆನು. ನಾವಿಬ್ಬರು ಹೊರತಾಗಿ ಮತ್ತಾರೂ ಇಲ್ಲಿ ರಕೂಡದೆಂದೇ ನನ್ನ ಉದ್ದೇಶವಾಗಿರುವುದು. ಅಮರನಾಥನು ಕಣ್ಣಿನ ಸಂಜೆಯಿಂದ ರಾಮನಾರಾ ಯಣನನ್ನು ಬೇರೆಯಕಡೆಗೆ ಹೋಗುವಂತೆ ತಿಳಿಸಲಾಗಿ, ರಾವನಾರಾಯಣನು ಕೂಡಲೆ ಬೇರೊಂದು ಕೋಣೆಯೊಳ ಗೆ ಹೋಗಿ ಕುಳಿತುಕೊಂಡನು, ಅದಾದಮೇಲೆ, ಅರಿಂದ ಮನು--ಅಮರಮಹಾಶಯ! ಶರಚ್ಚಂದ್ರನು ತಮಗೆ ಮುಖ್ಯ ನಾದ ಗುಮಾಸ್ತನೋ? ಎಂದನು. ಆಮರ_ಹೌದು. ಅರಿಂ-ಹಣದ ಲೇಣೆದೇಣೆಯೆಲ್ಲವೂ ಆತನೇ ನೋ ಡುತ್ತಿದ್ದನೋ? ಅವರ.-ಹೌದು ಅರಿಂ-ಎಷ್ಟು ದಿವಸದಿಂದ ಆತನು ನಿಮ್ಮಲ್ಲಿರುವನು? ಅಮರಮರು ವರ್ಷಗಳಿಂದ. ಅರಿಂ-ಶರಚ್ಚಂದ್ರ ಹೊರತಾಗಿ ಮತ್ತೆಷ್ಟು ಜನ ಗುಮಾ ಸರಿರುವರು? ಅಮರ-ಮತ್ತೆ ಇಬ್ಬರಿರುವರು. ಅರಿಂ-ಅವರುಗಳ ಹೆಸರೇನು? ಅಮರ-ಅವರಲ್ಲಿ ಒಬ್ಬನ ಹೆಸರು ಮಣಿಶಂಕರ; ಮ ತ್ತೊಬ್ಬನ ಹೆಸರು ರಾಮರತ್ನ. ಅರಿಂದಮು-ಅವರಿಬ್ಬರೂ ಯೋಗ್ಯರೋ? ಅನುರ-ಅವರು ಯೋಗ್ಯರೆಂದು ಹೈಳಲು ಕಾರಣ