ಪುಟ:ಚೋರಚಕ್ರವರ್ತಿ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೆರದು-ಸ್ವಾಮಿ, ತಾವು ವ ರನ್ನು ಹ .ತುಕಿಕೊಂಡು ಬಂದಿ ರುಪಿರಿ, ಎಂದು ಕೇಳಿದಳು, ಅರಿಂದಮುಜೀವ ತವಾಹನ ಮಹಾಶಯರು ವು .ಯರ.ವರೇ ? ಹೆಂಗಸು-ಇರುವರು. ಏನಪ್ಪಣೆ? ಅರಿ೦.ಅವರನ್ನು ನಾನೀಗ ನೋಡಲು ಅವಕಾಶ ದೊರೆತೀತೇ? ಹೆಂಗ ದು-ನಾನು ಹೇಳಲಾರೆ, ಅವರೊಡನೆ ಈಗ ಆರಾ ಮಾತನಾಡಿಕೊಂಡಿರುವರು. ಅರಿಂ-ಆರಾರಿವರು? ಹೆಂಗಸು ಅವರಾರೋ ನನಗೆ ತಿಳಿಯದು. ಅರಿಂ-ಯಜಮಾನ ಇು ಈಗ ಯಾವ ಕೋಣೆಯಲ್ಲಿ ಕುಳಿತುಕೊಂಡು ಮಾತನಾಡುತ್ತಿರುವರು? ಹೆಂಗಸು-ಅವರು ತಮ್ಮ ಸ್ವಂತ ಕೋಣೆಯಲ್ಲಿಯೇ ಇರುವರು. ಅರಿಂ-ಎರಡನೆಯ ಅಂತಸ್ತಿನಲ್ಲಿಯೋ? ಹೆಂಗಸು-ಇಲ್ಲ, ಮೂರನೆಯ ಅಂತಸ್ತಿನಲ್ಲಿ. ಅರಿಂ-ಯಾರೋ ಅವರನ್ನು ನೋಡಬೇಕೆಂದು ಬಂ ದಿರುವರೆಂದು ದಯವಿಟ್ಟು ಅವರಿಗೆ ತಿಳಿಸು. ಅಪ್ಪಣೆಯೆಂದು ಆ ಹೆಂಗಸು ಮನೆಯೊಳಗೆ ಹೋಗಿ ಸುಮಾರು ಹತ್ತು ನಿಮಿಷದೊಳಗಾಗಿ ಮತ್ತೆ ಬಂದು - ಬರ ಬಹುದು, ಮಹಾಶಯ, ಎಂದು ಹೇಳಿದಳು.