ಪುಟ:ಚೋರಚಕ್ರವರ್ತಿ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ» ಹೋಗಿದ್ದ ಜೇಮತನು ಮತ್ತೊಬ್ಬ ಮನುಷ್ಯನನ್ನು ಜತೆ ಯಲ್ಲಿ ಕರೆದುಕೊಂಡು ಬಂದನು. ಜತೆಯಲ್ಲಿ ಬಂದವನು ಕೇವ ಲ ವೃದ್ದನು, ಆತನ ಗಡ್ಡಮೀಸೆಗಳೆಲ್ಲ ನರೆತುಹೋಗಿದ್ದುವು. ಅರಿಂದಮನ ಹೃದಯದಲ್ಲಿ ಸಂದೇಹವಂಕುರಿಸಿ, ಅವ ರು ಬಂದ ಕೂಡಲೇ ಅರಿಂದಮನು ತನ್ನ ಆಸನದಿಂದ ಎದ್ದು ಜೀವತನನ್ನು ಕುರಿತು-ಈ ಮಹನೀಯರಾರು? ಎನಲಾ ಗಿ, ಜೀಮತನು-ಇವರು, ಇರ್ವು, ಎಂದು, ಹೆಸರನ್ನು ಹೇಳಿದರೇನೋ ಬಿಟ್ಟರೇನೋ ಎಂದು ಯೋಚಿಸುತ್ತಿರು ವರಲ್ಲಿಯೇ, ವೃದ್ದನು ತಾನು ಮುಂದು ಬಂದು-ಮಹಾ ಶಯ ! ನನ್ನ ಹೆಸರು' ಮೃತ್ಯುಂಜಯ, ತಮ್ಮನ್ನು ನಾನು ಇದಕ್ಕೆ ಮೊದಲು ಎಲ್ಲಿಯೋ ನೋಡಿರುವಂತೆ ಕಾಣುವುದು, ಎಂದನು. ಅರಿಂದಮನು ವೃದ್ಧನನ್ನು ನಿರೀಕ್ಷಿಸಿ ನೋಡಿ, ಆತ ನಾರೆಂಬುದನ್ನು ತಿಳಿದುಕೊಂಡಿದ್ದಲ್ಲದೇ, ಅಂತಹ ಸಮಯ ದಲ್ಲಿ ತಾನು ಅಲ್ಲಿಗೆ ಬಂದಿರುವುದೂ ಅಪಾಯಕರವೆಂದೂ ತಿಳಿದುಕೊಂಡನು. ಬಳಿಕ ಆತ್ಮರಕ್ಷಣೆಗೆ ಬೇಕಾದ ಉಪಾ ಯವನ್ನು ಯೋಚಿಸತೊಡಗಿದನು. ಜೀವನು ಮೃತ್ಯುಂಜಯನಕಡೆಗೆ ತಿರುಗಿ-ಅಯ್ಯಾ, ಈ ದೊಡ್ಡ ಮನುಷ್ಯರು ಶರಚ್ಚಂದ್ರನ ವಿಷಯದಲ್ಲಿ ಕೆಲವು ಸಂಗತಿಗಳನ್ನು ತಿಳಿಯಬೇಕೆಂದು ಬಂದಿರುವರು. ನಾನು ಇವರನ್ನು ನಿನಗೆ ಪರಿಚಯ ಮಾಡಿಕೊಟ್ಟಿರುವೆನು, ಅವರ ಮನೋರಥವನ್ನು ಸಾಧ್ಯವಾದಷ್ಟು ನೆರವೇರಿಸುವನಗು, ಎಂದು ಹೇಳಿ ಸುಮ್ಮನಾದನು.