ಪುಟ:ಚೋರಚಕ್ರವರ್ತಿ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧ ಬಲ್ಲಿರ? ಮೃತ್ಯುಂಜಯನು ಈ ಮಾತನ್ನು ಕೇಳಿ ಅಚ್ಚರಿಗೊಂ ಡವನಾಗಿ, ಅರಿಂದಮನನ್ನು ಕೊಂಚಹೊತ್ತು ರಪ್ಪೆ ಹಾಕದೆ | ನೋಡಿ-ಮಹಾಶಯ, ಆ ವಿಷಯ ನನಗೆ ಗೊತ್ತೇ ಇಲ್ಲ, ಎಂದನು. - ಅರಿಂ-ಆತನ ಹೆಂಡತಿಯು ನನಗೆ ತಂಗಿಯಾಗಬೇಕು. ಆದ್ದರಿಂದಲೇ ನಾನು ಆತನನ್ನು ಹುಡುಕುತ್ತಿರುವೆನು, ಆತ ನು ಓಡಿಹೋಗಿರುವ ಸ್ಥಳವನ್ನು ಯಾರಾದರೂ ತಿಳಿಸಿದರೆ, ನಾನವರಿಗೆ ಒಂದು ನೂರು ರೂಪಾಯಿಗಳನ್ನು ಬಹುಮಾನ ವಾಗಿ ಕೊಡುವೆನು. ಮೃತ್ಯು-(ಕೊಂಚ ಹೊತ್ತು ಯೋಚಿಸಿ) ಆತನು ಮಧುವನಕ್ಕೆ ಹೋಗಿರುವ ಸಂಗತಿಯು ಅಷ್ಟಾಗಿ ನಿಜವೆಂದು ನನಗೆ ನಂಬುಗೆ ಸಾಲದು, ಅವನು ಮತ್ತೆಲ್ಲಿಗೆ ಹೋಗಿ ರಬೇಕು, ಅದು ನನಗೆ ಗೊತ್ತಿಲ್ಲ. ಅರಿಂ-( ಹತಾಶನಾಗಿ) ಆತನ ವಿಷಯವು ತಮಗೆ ವಿ ಶೇಷವಾಗಿ ಗೊತ್ತಿಲ್ಲವೆಂದು ತೋರುವ್ರದು. ಮೃತ್ಯಂ-ನನಗೆ ತಿಳಿದಿದ್ದನ್ನು ತಿಳಿಸಿದೆನು, ಇದಕ್ಕಿಂ ತಲೂ ಹೆಚ್ಚಾಗಿ ನನಗೆ ಗೊತ್ತಿಲ್ಲ. ಅರಿಂದಮನು ಈ ಮಾತನ್ನು ಕೇಳಿ, ಇವರು ಒಳ ಗುಟ್ಟನ್ನು ಬಹಿರಂಗ ಪಡಿಸದೇ ಸುಳಾಡುತ್ತಿರುವರೆಂದು ತಿಳಿದು, ಜೀಮೂತನ ಆಪ ಎಣೆಯನ್ನು ತೆಗೆದುಕೊಂಡು ಹೊರಗೆ ಹೊರಟನು, ಹೊರಡುವಾಗ, ಜೀಮೂತವಾಹನ ಮುತ್ತು, ಮೃತ್ಯುಂಜಯ ಇವರಿಬ್ಬರನ್ನೂ ಸಾಕ್ಷಾತ್ತಾಗಿ ನೋಡಿದ್ದರಿಂದ, ಇವರಿಗೆ ಶರಚ್ಚಂದ್ರನ ಪರಿಚಯವು ಚೆನ್ನಾ