ಪುಟ:ಚೋರಚಕ್ರವರ್ತಿ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೀನಿನವನು; ಹೆಚ್ಚಾಗಿ ಗಲಾಟೆ ಮಾಡುವುದಾದರೆ ಕಂಡೇ ಇದೆ, ಎಂದನು. ಆದನ್ನು ಕೇಳಿದ ಹೆಂಗಸು ಬಿರುಗಾಳಿ ಯಲ್ಲಿ ಬಾಳೆಯ ಗಿಡವು ನಡುಗುವಂತೆ ಥರಥರ ನಡುಗಿದಳು. ಅರಿಂದಮನು ಅದನ್ನು ಲಕ್ಷಿಸದೆ-ನೀವೆಲ್ಲ ಕಳ್ಳರಿದ್ದಿರಿ; ನಿಮ್ಮ ನ್ನು ನಾನು ಸುಮ್ಮನೇ ಬಿಡೆನು. ನಾನು ಕೇಳಿದ್ದಕ್ಕೆ ಸರಿ ಯಾಗಿ ಉತ್ತರಕೊಡು; ಇಲ್ಲದಿದ್ದರೆ ನಿನ್ನ ಬಾಳು ನಾಯಿ ಗಿಂತ ಕಡೆಯಾದೀತು, ಎನಲು, ಆ ಹೆಂಗಸು-ನಾನು ಮನೆ ಯ ದಾನಿಯು, ನನಗೆ ಯಾವುದೂ ಗೊತ್ತಿಲ್ಲ, ಗೊತ್ತಿಲ್ಲ, ಗೊತ್ತಿಲ್ಲ, ಎಂದಳು. ಪ್ರಶ್ನೆ- ಈಗ ಮೇಲಿರುವವರನ್ನು ನೀನು ಯಾವಾಗಲೂ ಇಲ್ಲಿ ನೋಡಿಲ್ಲವೋ? ಉತ್ತರ-ಇಲ್ಲ. ಪ್ರಶ್ನೆ-ಖಂಡಿತವಾಗಿ ಹೇಳು? ಉತ್ತರ ಖಂಡಿತವಾಗಿಯೂ ನೋಡಿಲ್ಲ. ಸುಳ್ಳು ಹೇಳಿ ನನಗಾಗುವುದೇನು? ಪ್ರಕೃಹಾಗಾದರೆ ನಾನೇ ಕಂಡು ಹಿಡಿಯುವೆನು. ನನಗೆ ನೀನು ಸಹಾಯಳಾಗಬೇಕು. ಉತ್ತರ-ನಾನು ಹೆಣ್ಣು ಹೆಂಗಸು, ನನ್ನಿಂದಾಗುವುದೇ ನಿದೆ? ನನ್ನನ್ನು ಬಿಟ್ಟು ಬಿಡಬಾರದೆ? ಒಳಸಂಗತಿಗಳಾವು ವೂ ನನಗೆ ಗೊತ್ತಿಲ್ಲ. ಅರಿಂದಮನು ತನ್ನ ಮುಖ್ಯಿಯನ್ನು ಅವಳ ಮುಖದ ಹತ್ತಿರ ಹಿಡಿದುಕೊಂಡು-ಹರಾಮಿ ! ನಿನಗೆ ಯಾವುದೂ ಗೊತ್ತಿಲ್ಲವೋ ? ಇಂತಹ ವಿದ್ಯೆಯನ್ನು ನನ್ನಲ್ಲಿ ತೋರಿಸುವು ದಾದರೆ, ನಿನ್ನನ್ನು ಧೂಳೀಪಟ ಮಾಡಿಬಿಡುವೆನು, ನಿನ್ನ