ಪುಟ:ಚೋರಚಕ್ರವರ್ತಿ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ಅಳು ಗಿಳು ನಾನು ಲಕ್ಷಕ್ಕೆ ತರತಕ್ಕವನಲ್ಲ, ನಿನಗೆ ಯಮ ಲೋಕದಲ್ಲಿ ಆಗ ತಕ್ಕ ಶಿಕ್ಷೆಯು ಇಲ್ಲಿಯೇ ಆದೀತು, ಎಚ್ಚ ರಿಕೆ ! ಎಂದನು. ಉತ್ತರಅದೇನು ಕೇಳೊಣಾಗಲಿ, ತಿಳಿದಿದ್ದನ್ನು ಹೇಳುವೆನು. ಈ ಪ್ರಶ್ನೆ-ಮಹಡಿಯ ಮೇಲೆ ಜೀಮೂತವಾಹನನಿದ್ದ ಕೋಣೆಗೆ ಸೇರಿದ ಹಾಗೆ ಮತ್ತೊಂದು ಕೊಣೆ ಇದ್ದ ಹಾಗೆ ಕಾಣುವುದು, ಅಲ್ಲಿಗೆ ಹೋಗುವುದಕೆ ಬೇರೊಂದು ದಾರಿ ಯುಂಟೆ? ಉತ್ತರ-ಉಂಟು. ತಮಗೆ ಆತ್ಮವಿರುವುದಾದರೆ ನಾನು ಅಲ್ಲಿಗೆ ಕರೆದುಕೊಂಡು ಹೋಗಬಲ್ಲೆನು, ನನ್ನನ್ನು ಪೋಲೀಸಿಗೆ ಹಿಡಿದು ಕೊಡದೇ ಹೋದರೆ, ತಾವು ಹೇಳಿದ ಕೆಲಸವೆಲ್ಲವನ್ನೂ ಮಾಡುವೆನು, ನಾನು ತಮ್ಮ ದಾಸ ನುದಾಸಿ, ಪ್ರಶ್ನೆ - ಬಾಯಿಮುಚ್ಚು, ನಿನ್ನ ಚಾಲಾಕಿನ ಮಾತು ಸಕು, ನಿನ್ನನೀಗ ಅಲ್ಲಿಗೆ ಕರೆದುಕೊಂಡು ಹೊರಡು. ನನ್ನ ನ್ನು ಈಗ ವಂಚಿಸಿ, ಬೇರೊಂದು ಸ್ಥಳಕ್ಕೆ ಕರೆದೊಯ್ಯುವು ದಾದರೆ ನಿನ್ನ ಹೆಣ ಹಾಕುವೆನು, ಕಂಡೆಯಾ? ಉತ್ತರ-ವಂಚನೆಯೇತಕೆ? ತಾವು ನನ್ನ ಜತೆಯಲ್ಲಿ ಬರೋಣಾಗಲಿ, ನಾನು ತಮ್ಮನ್ನು ಸರಿಯಾದ ದಾರಿಯಲ್ಲಿ ಯೇ ಕರೆದುಕೊಂಡು ಹೋಗುವೆನು. ತಾವು ಶಬ್ದ ಮಾಡದಂತೆ ನನ್ನ ಹಿಂದೆ ಹಿಂದೆಯೇ ಬರಬೇಕು. ಮಾರ್ವಾಡಿ ಹೆಂಗಸು ಈ ರೀತಿಯಾಗಿ ಹೇಳಿ ಮುಂ ದಾದಳು, ಅರಿಂದಮನು ಅವಳ ಹಿಂದೆ ಹಿಂದೆಯೇ ಹೋ ರಟನು.