ಪುಟ:ಚೋರಚಕ್ರವರ್ತಿ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫ ಹದಿನಾರನೆಯ ಅಧ್ಯಾಯ ಮಾರ್ವಾಡಿ ಹೆಂಗಸು ಅರಿಂದಮನನ್ನು ಜತೆಯಲ್ಲಿ ಕರೆ ದುಕೊಂಡು ಬೇರ೦ದು ದಿಕ್ಕಿನಿಂದ ಅಂಧಕಾರಮಯವಾದ ಮೆಟ್ಟಿಲುಗಳನ್ನಿಳಿದು ಎರಡನೆಯ '೦ತಸ್ತಿಗೆ ಬಂದಳು ಅಲ್ಲಿಂದ ಮತೊ೦ದು ದಾರಿಯನ್ನು ಹಿಡಿದು ಮತ್ತೆ ವರತೆಯ, ಅ೦ ತಸ್ತಿಗೆ ಹೊರಟಳ, ಅರಿಂದಮನಿಗೆ ತಾನು ಎಲ್ಲಿಂದ ಎಲ್ಲಿಗೆ ಹೊಗುತ್ತೇನೆಂಬುದೇ ಗೊತ್ತಾಗಲಿಲ್ಲ, ಏತಕಂದರೆ-ಇಂತಹ ಕಾರ್ಗತ್ತಲೆಯುಳ್ಳ ಮನೆಯನ್ನು ಅವನೆಂದಿಗೂ ನೋಡಿರಲಿಲ್ಲ. ಮುರನೆಯ) ಅಂತಸಿ ನಲ್ಲಿ ಒಂದು ಗಾಢಾಂಧಕಾರರೂ ರಿತವಾದ ಕೋಣೆಯೊಳಗೆ ಹೆಂಗಸು ಪ್ರವೇಶಮಾಡಿ ಅರಿಂದ ಮನನ್ನು ಕುರಿತು ಸ್ವಾಮಿ, ಈಗ ನಾವು ಉದ್ದೇಶಮಾಡಿದ ಸ್ಥಳಕ್ಕೆ ಬಂದಿರುವೆವು, ಈ ಕೋಣೆಯಿ ದಲೇ ನೀವು ಮೊ ದಲು ಕುಳಿತಿದ್ದ ಕೆ.ಇಣೆಗೆ ಹೋಗಬಹುದು, ಮನೆಯೊಳಗೆ ಪ್ರವೇಶ ಮಾಡಲೂಬಹುದು, ಇಲ್ಲಿರುವ ಬಾಗಿಲ ಬಳಿ ಕಿವಿ ಯಿಟ್ಟು ಕೇಳುವದಾದರೆ, ಯಜಮಾನನ ಕೋಣೆಯೊಳಗೆ. ಮೆಲ್ಲಗೆ ಮಾತನಾಡಿದ - ಕೇಳಬರುವುದು, ಎಂದು ಹೇಳಿ ಅಲ್ಲಿಂದ ಹೊರಟು ಹೋದಳು, ಅವಳು ಯಾವ ಕಡೆಗೆ ಹೊರಟುಹೋದಳೆಂಬುದು ಅಂಧಕಾರದಲ್ಲಿ ಅರಿಂದಮನಿಗೆ. ಕೊಂಚವೂ ಗೊತ್ತಾಗಲಿಲ್ಲ. ಇದರಿಂದ ಆ ಹೆಂಗಸು ತನ್ನ ಕೈಯಿಂದ ಉದ್ದಾರವಾಗ ವದಕ್ಕಾಗಿ ಈ ರೀತಿಯಾವ ತಂತ್ರ ವನ್ನು ಮಾಡಿರುವಳೆಂದು ಅವನಿಗೆ ಬೋಧೆಯಾಯಿತು, ಆದ ರೂ ಅವನು ಹೆದರದವನಾಗಿ, ಅಂಧಕಾರದಲ್ಲಿಯೇ ಮುಂದ ಕೈ ಹಜ್ಜೆಯನ್ನಿಡುತ್ತಾ ಹೊರಟನು. ಆಗ ಎಲ್ಲಿಂದಲೋ