ಪುಟ:ಚೋರಚಕ್ರವರ್ತಿ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೫ ತಡವರಿಸುತ್ತಾ ಹೊರಟನು. ಒಂದು ಕಡೆಯಲ್ಲಿ ತಪ್ಪಲೆ ತಂ ಬಿಗೆ ಕೊಡ ಮುಂತಾದುವು ನೆಲದಮೇಲೆ ಬಿದ್ದಿದ್ದವು, ಅರಿಂದ ಮನು ಕಣ್ಣು ಕಾಣದೆ ಅವುಗಳನ್ನು ಎಡವಲಾಗಿ ರ್ಟಟ್ರ ಟಸಾರ್‌ ಎಂದು ಶಬ್ದ ವಾಯಿತು, ಆ ಕೂಡಲೆ ಜೀಮೂತ ರಾಮರತ್ನರು ಗಾಬರಿಬಿದ್ದು ಶಬ್ದ ಬಂದಕಡೆಗೆ ಓಡಿದರು. ಅರಿಂದಮನಿಗೆ ಯೋಚನೆಗಿಟ್ಟಿತು. ಕೈಯಲ್ಲಿ ಆಯು ಧವನ್ನು ಹಿಡಿದುಕೊಂಡು ರಾಕ್ಷಸರಂತೆ ಕದನವಾಡುವ ಜೀ ಮೂತರಾಮರತ್ನರೊಡನೆ ಹೋರಾಡಬೇಕೆ? ಇಲ್ಲವೇ, ಪ್ರ ಕೃತದಲ್ಲಿ ಅಲ್ಲಿಂದ ಪಲಾಯನವಾಗಬೇಕೆ? ಇವೆರಡರಲ್ಲಿ ಯಾ ಇದು ಸೂಕ್ತವಾದುದು, ಎಂದು ಯೋಚಿಸಿ, ಅರಿಂದಮನು ಕೊನೆಗೆ ಪಲಾಯನವಾಗುವುದೇ ಲೇಸೆಂದು ತಿಳಿದು, ತಾನು ಯಾವ ದಾರಿಯಿಂದ ಬಂದನೋ ಅದೇ ದಾರಿಯನ್ನು ಹುಡುಕಿ ಅಲ್ಲಿಂದ ಹೊರಟನು, ಅವನ ಹಿಂದೆಹಿಂದೆಯೇ ಅವನ ಶತ್ರು ಗಳೂ ಬರುತ್ತಿದ್ದು ದನ್ನು ತಿಳಿದು, ಪ್ರತ್ಯುತ್ಪನ್ನ ಮರೆಯಾದ ಅರಿಂದಮನು ಬೇಗ ಬೇಗ ಓಡಿಬಂದು ದಾರಿಯಲ್ಲಿ ಸಿಕ್ಕಿದ ಒಂದು ಬಾಗಿಲನ್ನು ಬಲವಾಗಿ ತಳ್ಳಿ ಅಗಳಿಯನ್ನು ಹಾಕಿದ ನು, ಜೀಮೂತರಾಮರತ್ನರು ಆ ಕೂಡಲೆ ಓಡಿಬಂದು ಬಾ ಗಿಲನ್ನು ಕಾಲುಗಳಿಂದ ಬಲವಾಗಿ ಒದೆಯಲಾರಂಭಿಸಿದರು, ಅರಿಂದಮನು ಕೊಂಚ ಅವಕಾಶ ಸಿಕ್ಕಿದ್ದನ್ನು ಹಾಳುಮಾ ಡಿಕೊಳ್ಳದೆ ಮುಂದೆ ಮುಂದೆ ಓಡಿ ಕ್ಷಣಮಾತ್ರದಲ್ಲಿಯೇ ಮೂರನೆಯ ಮಹಡಿಯಿಂದ ಎರಡನೆಯ ಮಹಡಿಗೆ ಇಳಿದ ನು, ಅವನು ಕೆಳಗಿಳಿದು ನೋಡಲಾಗಿ, ಅಲ್ಲಿ ಮಾರ್ವಾಡಿ ಹೆಂಗಸು ಮೊದಲಿನಂತೆ ನಿಂತಿದ್ದಳು, ಅವಳನ್ನು ನೋಡಿದ ಕೂಡಲೆ, ಅರಿಂದಮನು-ದಾಸಿ ನನ್ನನ್ನು ಬೇಗನೆ ಮನೆಯಿಂ