ಪುಟ:ಚೋರಚಕ್ರವರ್ತಿ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ಅರಿಂದಮನನ್ನು ಹಿಂದೆ ಹಿಂದೆಯೇ ಬರುವಂತೆ ಹೇಳಿ ತಾನು ಮುಂದಾದಳು, ಅರಿಂದಮನು ಮತ್ತೇನೂ ಮಾತನಾಡದೆ, ಅ ವಳನ್ನು ಹಿಂಬಾಲಿಸಿಯೇ ಹೊರಟನ;, ಮೆಲ್ಲಗೆ ಹೋಗು ತಿದ್ದ ಹೆಂಗಸು ಓಡಲಾರಂಭಿಸಿದ್ದನ್ನು ನೋಡಿ, ಅರಿಂದಮು ನೂ ದಾರಿಯಲ್ಲಿ ಏನಿರುವುದೆಂಬುದನ್ನೂ ಲೆಕ್ಕಿಸದೆ ಓಡತೊ ಡಗಿದನ.; ಆದರೆ ಅವನ ಮನದಲ್ಲಿ ದಾಣವಾದ ಸಂಶಯವು ಪದಾರ್ಪಣ ಮಾಡಿತು. ಹತ್ತೊಂಬತ್ತನೆಯ ಅಧ್ಯಾಯ. ಅರಿಂದವನು ಆ ಹೆಂಗಸಿನ ಹಿಂದೆಯೇ ಓಡುತ್ತಾ ಸುಟ್ಟ ಮೋರೆಯವಳೆ ! ನನ್ನನ್ನು ಎಲ್ಲಿಗೆ ಕರೆದೊಯ್ಯುವೆ? ಜೋಕೆ, ನನ್ನನ್ನು ತೊಂದರೆಗೆ ನಿಲ್ಲಿಸುವೆಯಾದರೆ, ನಿನ್ನ ನ್ನು ನಾನು ಧ್ವಂಸವಾಡಿಬಿಡುವೆನು, ಎಂದನು.

  • ಡೆಂಗಸು-ನಾನು ನಿಮಗೆ ಮೋಸಮಾಡುವುದಿಲ್ಲ ಈ ಕಡೆ ತಾವು ಹೊರಟರೆ, ತಮಗೆ ಬೇಗ ದಾರಿಸಿ¥ವುದು. ಈಗ ನಾ ತಮ್ಮನ್ನು ಮನೆಯಿಂದ ಹೊರಗೆ ಕರೆದುಕೊಂ ಡು ಬಂದಿರುವೆನು. ಹಿತ್ತಲ ಬಾಗಿಲು ತರದ ಕೂಡಲೆ, ನೀವು ನಿರಪಾಯವಾಗಿ ಹೊರಗೆ ಹೋಗಬಹುದು, ಒಂದು ವೇಳ ಹಿತ್ತಲ ಬಾಗಿಲೂ ಬಂದಾಗಿದ್ದರೆ ನನ್ನ ಯತ್ನವಿಲ್ಲ.

ಅರಿ೦-ಈ ಮನೆಯಿಂದ ಹೊರಗೆ ಹೋಗಲು ಮ ತಾವ ದಾರಿಯೂ ಇಲ್ಲವೋ ? ಹೆಂಗಸು-ಇಲ್ಲ; ಈ ಕಡೆ ಮತ್ತಾವ ದಾರಿಯ ಅಲ್ಲ.