ಪುಟ:ಚೋರಚಕ್ರವರ್ತಿ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೧ ಯರು ತಮ್ಮ ತಮ್ಮ ಮನದಲ್ಲಿ ಏನೆಂದುಕೊಳ್ಳುವರೋ ಒಂದು ವಿಷಯವನ್ನು ಹೇಳುವಾಗ ಮತ್ತೊಂದನ್ನು ಬಿಟ್ಟು ಬಿಡುವು ದೂ, ಮತ್ತೊಂದನ್ನು ಹೇಳುವ ವ್ಯಾಜದಿಂದ ಪ್ರಕೃತವನ್ನು ದೂರ ಮಾಡುವುದೂ ಗ್ರಂಥಕರ್ತರ ಸಾಮಾನ್ಯವಾದ ಸ್ವಭಾವವಾದುದರಿಂದ, ಈ ದೊಡ್ಡ ತಪ್ಪನ್ನು ದಯವಿಟ್ಟು ಎಲ್ಲರೂ ಕ್ಷಮಿಸುವರೆಂದು ನಂಬಿ ಪ್ರಕೃತ ಕಥಾಧಾರನಾದ ಅಮರನಾಥನ ವಿಷಯವೇನಾಗಿರುವುದೆಂಬುದನ್ನು ಇಲ್ಲಿ ವಿವ ರಿಸುವೆವು. ಹಾಗೆ ವಿವರಿಸದಿದ್ದರೆ ಗ್ರಂಥದ ಸಾಮರಸ್ಯವು ಛನ್ನ ವಿಚ್ಛಿನ್ನವಾಗಿ ಹೋಗುವುದು. ಶರಶ್ಚಂದ್ರನ ಅಣ್ಣನ ಹೆಸರಿನಲ್ಲಿ ವಧುವನದಿಂದ ಬಂ ದ ತಂತಿಯವರ್ತಮಾನವು ಅಮರನಕ್ಕೆ ಸೇರಿದಾಗಿನಿಂದಲೂ, ಶರಚ್ಚಂದ್ರನಲ್ಲಿದ್ದ ಆತನ ಪೂರ್ಣ ವಿಶ್ವಾಸವು ಕೃಷ್ಣಪಕ್ಷದ ಚಂದ್ರನಂತೆ ಹಣೇ ಕ್ಷಣೇ ಕ್ಷೀಣವಾಗುತ್ತ ಬಂದಿತು, ಮ ನುಷ್ಯಮಾತ್ರದವನಿಗೆ ಹೀಗಾಗುವುದು ಆಶ್ರವಲ್ಲ, ಅಮರ ನು ತಂತಿಯವರ್ತಮಾನವನ್ನು ಕೈಯಲ್ಲಿ ಹಿಡಿದುಕೊಂಡು ಯೋಚಿಸಿದ್ದೇನೆಂದರೆ:-ಶರಚ್ಚಂದ್ರನು ನನ್ನಲ್ಲಿ ಸುಳ್ಳು ಹೇ ೪ ಹೊರಟುಹೋದನು, ಇದರಲ್ಲಿ ಕಿಂಚಿತ್ತೂ ಸಂಶಯವಿ ಲ್ಲ. ಅವನ ಅಣ್ಣನಿಂದ ಅವನಿಗಾವ ಟೆಲಿಗ್ರಾಮ ಬರಲಿಲ್ಲ. ಈ ಅರ್ಥವು ಈ ತಂತಿಯವರ್ತಮಾನದಿಂದಲೇ ಗೊತ್ತಾಗು ವುದು, ಕದ್ದು ಓಡಿಹೋಗತಕ್ಕವನು, ತನ್ನ ಅಣ್ಣನ ಪರಿಚ ಯ, ಊರು ಮುಂತಾದ್ದನ್ನು ತಿಳಿಸಿಹೋಗಲು ಕಾರಣವೇ ನಿರುವುದು, ಇದಲ್ಲದೇ ಹಣವನ್ನು ಅಪಹರಿಸಿಕೊಂಡು ಹೋ ಗತಕ್ಕವನು ಸಂಶಯಕ್ಕೆ ಆಸ್ಪದವಿಲ್ಲದಂತೆ ಲೆಕ್ಕ ಬರೆದು ಪ ಲಾಯನವಾಗುವನೇ? ಮತ್ತು ಅನೇಕ ವರ್ಷಗಳಿಂದ ಕೇವಲ