ಪುಟ:ಚೋರಚಕ್ರವರ್ತಿ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಶ್ವಾಸಕ್ಕೆ ಪಾತ್ರನಾದವನು ತನ್ನ ಯಜಮಾನನಿಗೆ ಸರ್ವನಾ ಶವನ್ನುಂಟುಮಾಡಲು ಯತ್ನ ಮಾಡಬಲ್ಲನೇ? ಮನಸ್ಸುತಾ ನೇ ಒಪ್ಪುವುದುಹೇಗೆ? ಬಹು ಮಾತಿನಿಂದೇನು? ಶರಚ್ಚಂದ್ರ ನು ಉಂಡವನೆಗೆ ಎರಡುಬಗೆದು ಓಡಿಹೋದನು, ನನಗಾದ ರೋ ಸರ್ವನಾಶವಾಯಿತು. ಪೂರ್ಣ ವಿಶ್ವಾಸಕ್ಕೆ ಪೂರ್ಣ ಫಲವನ್ನೂ ನಾನು ಹೊಂದಿದೆನು. ಅವರನು ಈ ರೀತಿಯಾಗಿ ಯೋಚಿಸಿ ತನ್ನ ಕೈಯ ಲ್ಲಿದ್ದ ಕಾಗದವನ್ನು ತನ್ನ ಕೈ ಪೆಟ್ಟಿಗೆಯಲ್ಲಿಟ್ಟು, ಗಡಿಯಾರ ವನ್ನು ನೋಡಿದನು, ಗಂಟೆಯು ಐದು ಹೊಡೆದುಹೋಗಿದ್ದಿ ತು, ಎಷ್ಟು ಹೊತ್ತಾದರೂ ಯಾವ ಯೋಚನೆಯೂ ಬಗೆ ಹ ರಿಯದೇ ಹೋದ್ದರಿಂದ ಕಾಗದ ಪತ್ರಗಳೆಲ್ಲವನ್ನೂ ಬಂದೆ ಬಸ್ಸು ಮಾಡಿ, ಅವರನು ಮನೆಯೊಳಗೆ ಹೊರಟುಹೋದ ನು, ಯೋಚನೆಯಿಂದ ಶರೀರದಲ್ಲಿ ಉಷ್ಯವು ಅಧಿಕವಾಗಿ ವಿಶ್ರಾಂತಿಯನ್ನು ಹೊಂದಲು ಮಲಗುವ ಮನೆಗೆ ಹೋಗಿ ತನ್ನ ಹಾಸಿಗೆಯಮೇಲೆ ಮಲಗಿದನು. ಅಷ್ಟು ಬಿತ್ತಿಗೆ ಸರಿ ಯಾಗಿ ಅಮರನ ಮಗಳು ಅಲ್ಲಿಗೆ ಬಂದು-ಅಪ್ಪ, ನಿನ್ನ ಮುಖವು ಬಾಡಿರುವುದು; ನಿನ್ನ ಶರೀರವು ಸ್ಪಸ್ಟವಾಗಿಲ್ಲವೆಂ ದು ತೋರುವುದು, ಅಕಸ್ಮಾತ್ತಾಗಿ ಹೀಗಾಗಲು ಕಾರಣವೇ ನು? ಎಂದು ಕೇಳಲಾಗಿ, ತಂದೆಯು-ಮಗು, ನಾನು ಅ ಪಾರವಾದ ಚಿಂತಾಸಾಗರದಲ್ಲಿ ಮುಳುಗಿರುವೆನು, ಆದುದರಿಂ ದ ನನ್ನ ಶರೀರದಲ್ಲಿ ಸಂತಾಪವು ಅಧಿಕವಾಗಿರುವುದು, ಎಂದು ಉತ್ತರವಿತ್ತನು. ಮಗಳು-ಚಿಂತೆಗೆ ಕಾರಣವೇನು? ತಂದೆ-ಅನೇಕ ಕಾರಣಗಳಿವೆಯಮ್ಮ.