ಪುಟ:ಚೋರಚಕ್ರವರ್ತಿ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩ ರಬೇಕೆಂದು ನಾನು ನಿನಗೆ ಹೇಳಲಿಲ್ಲ. ತಂದೆ ಶರತ್ತು ನನ್ನ ಮುಂದೆ ಹಾಗೆ ಹೇಳಿಹೋದ ರೂ ಆತನು ಮಧುವನಕ್ಕೆ ಹೋಗಿಲ್ಲವೆಂದು ಪ್ರಮಾಣಾಂತರ ಗಳಿಂದ ತಿಳಿದು ಬಂದಿರುವುದು. ಮಗಳು-ಅಪ್ಪ,ಶರಚ್ಚಂದ್ರನ ವಿಷಯದಲ್ಲಿಯೂ ಸಂಶ ಯವೇ ? ತಂದೆ-ಮಗು, ಮೊದಲು ಮೊದಲು ಸಂದೇಹವಿರ ಲಿಲ್ಲ. ಈಗ ಸಂದೇಹಕ್ಕೆ ಆಸ್ಪದವುಂಟು. ಮಗಳು-ಕಾರಣ ? ತಂದೆ-ಶರಚ್ಚಂದ್ರನು ಹೇಳಿದ ಮಾತು ನಿಜವೋ ಸುಳ್ಳೋ ಎಂದು ತಿಳಿದುಕೊಳ್ಳುವುದಕ್ಕಾಗಿ, ನಾನು ಆತನ ಅಣ್ಣನಿಗೊಂದು ತಂತಿಯನ್ನು ಕಳುಹಿಸಿದೆನು, ಅದಕ್ಕೆ ಶರ ಇು ಇಲ್ಲಿಗೆ ಬರಲಿಲ್ಲ. ನಾನು ಯಾವ ರೋಗದಿಂದಲೂ ವೀಡಿ ತನಾಗಿಲ್ಲ, ಆತನನ್ನು ನಾನು ಇಲ್ಲಿಗೆ ಬರಬೇಕೆಂದೂ ಬರೆ ದವನಲ್ಲ, ಎಂದು ಉತ್ತರ ಬಂದಿರುವುದು, ಆದುದರಿಂದ, ಮಗು, ನೀನೇ ಹೇಳು, ನಾನು ಈ ವಿಷಯದಲ್ಲಿ ಸಂಶಯ ಪಡಬೇಕೋ ಬೇಡವೋ ? ಮಗಳು ತಂದೆಯ ಮುಖವನ್ನು ದುರುದುರು ನೋಡು ತಾ-ಅಪ್ಪ, ನೀನು ಹೇಳುವುದು ನನಗೆ ಅರ್ಥವೇ ಆಗುವು ದಿಲ್ಲ. ಶರಚ್ಛಂದನು ನನ್ನಲ್ಲಿ ಹೇಗೋ, ನಿನ್ನಲ್ಲಿಯೂ ಹಾಗೆಯೇ ಸುಳ್ಳು ಹೇಳಿ ಹೊರಟುಹೋದನೆ ? ಎಂದು ನು ಡಿದಳು. - ತಂದೆ-ಅಮ್ಮ ಇಂದಿರೆ ! ಆತನು ಸುಳ್ಳು ಹೇಳಿಯೇ ಹೊಗಿರಬೇಕೆಂದು ತೋರುವುದು,