ಪುಟ:ಚೋರಚಕ್ರವರ್ತಿ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧ ಜೂಜಿನ ವ್ಯಸನವು ತಲೆಗೆ ಹತ್ತಿದರೆ ಮನುಷ್ಯಮಾತ್ರದವ ನು ತನ್ನ ಕೆಲಸದಲ್ಲಿ ಆದರವುಳ್ಳವನಾಗಿರುವನೇ? ಮೋಸಗಾ ರರು ಹೇಳುವ ಸುಳ್ಳು ವರ್ತಮಾನವನ್ನು ನಂಬಿ ವ್ಯಸನಪಡು ವುದು ನಿನ್ನಂತಹ ಧೀರನಿಗೆ ತಕ್ಕುದಲ್ಲ, ಎಂದಳು. ಅಮರ-ನನಗೆ ಹೇಳಿದವರ ಮಾತನ್ನು ಕೇಳದಿರಲು ಕಾರಣವಿಲ್ಲ, ಜಜನಕಟ್ಟೆ, ಮಾಲೀಕನೇ ಇಲ್ಲಿಗೆ ಬಂದು ಶರಚ್ಚಂದ್ರನಿಂದ ತನಗೆ ವಿಪರೀತವಾಗಿ ಹಣ ಬರಬೇಕೆಂದು ಹೇಳಿ ಹೋದನು. ಇಂದಿರಾ-ಯಾರು ಚರಿತ್ರಹೀನರೂ, ಯಾವನ ವಾ ತನ್ನು ಯಾರು ನಂಬುವುದಿಲ್ಲವೋ , ಯಾರ ದರ್ಶನವು ಮಹಾ ಪಾಪಕರವೆಂದು ಜನರು ತಿಳಿದಿರುವರೋ, ಯಾರಿಗೋ ರವಾಗಿ ಬಂದೀಖಾನೆಯು ತನ್ನ ಬಾಗಿಲುಗಳನ್ನು ನಿತ್ಯವೂ ತೆರೆದಿಟ್ಟುಕೊಂಡಿರುವುದೋ, ವಿದ್ಯಾವಂತರು ಯಾರನ್ನು ತ ಪೋಯಡ್ಡರೆಂದು ಪರಿಗಣಿಸಿರುವರೋ, ಅಂತಹ `ದು ರ್ಮಾರ್ಗರಲ್ಲಿ ಒಬ್ಬನಾದವನ ಮಾತು ನಿನಗೆ ಪುಧಾನವಾಯಿ ತು ಅನೇಕ ತರದಲ್ಲಿ ಸಾಧುವೆನಿಸಿದ್ದ ಶರಚ್ಚಂದ್ರನು ಒಂ ದು ಕ್ಷಣಮಾತ್ರದಲ್ಲಿ ಗುಣ ಹೀನನಾಗಿ ಬಿಟ್ಟನಲ್ಲವೆ ? ಅಮರ-(ಉತ್ತರವಿಲ್ಲ.) | ಇಂದಿರಾ_ತಂದೆಯೇ ! ಇತರರ ಮಾತಿನಿಂದ ಯೋ ಗ್ಯರಾದವರನ್ನು ಕೆಡಿಸಲಣಿಸಬೇಡ, ದೇವರು ಅನ್ಯಾಯ ಗಳನ್ನು ಸಹಿಸನು ಅವರ-ನಾನು ಯಾವ ಪ್ರಮಾಣದಿಂದ ಶರಚ್ಚ ಂದ ನನ್ನು ನಿರ್ದೋಷಿಯನ್ನಾಗಿ ಮಾಡಲಿ, ಈಗ ಸಿಕ್ಕಿರುವ ಪ್ರಮಾಣವೆಲ್ಲವೂ ಆತನಿಗೆ ವಿರೋಧವೇ ಆಗಿರುವುದು, ಈ ದೈವಿಧ್ಯದಲ್ಲಿ ನನಗೆ ದಿಕ್ಕೇ ತೋರುವುದಿಲ್ಲ. ಇಂದಿರಾ-ನಮ್ಮ ಮನೆಯಲ್ಲಿ ನಡೆದ ವಿದ್ಯಮಾನವನ್ನು ಬಹಿರಂಗ ಪಡಿಸಿದೆಯ ?