ಪುಟ:ಚೋರಚಕ್ರವರ್ತಿ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭! ಅವರ(ಎದ್ದು ಕುಳಿತು) ಮಗು, ನನ್ನ ಹೃದಯ ದಲ್ಲಿ ಆಶಾ ಸಂಚಾರವಾದಂತಿದೆ. 'ನಮ್ಮ ಮನೆಯಲ್ಲಿ ನಡೆದ ಕಳುವಿನ ಪತ್ತೆಗಾಗಿ ಪ್ರಸಿದ್ದ ಪತ್ತೇದಾರನಾದ ಅರಿಂದಮ ನೆಂಬುವನನ್ನು ನಿಯಮಿಸಿಳುವನು, ಆತನನ್ನು ನೋಡಿ ಬಹಳ ಹೊತ್ತಾಯಿತು, ಆತನೇನಾದರು ಮನಸ್ಸು ಮಾಡಿದರೆ ಶರತ್ತು ನಿರ್ದೋಷಿಯಾಗಬಹುದು, ( ಗಡಿಯಾರವನ್ನು ನೋಡಿ ) ಅರಿಂದಮನು ಇಲ್ಲಿಗೆ ಬರುವ ಹೊತ್ತಾಯಿತು. ಆತನನ್ನು ನಿನ್ನಲ್ಲಿಗೆ ಕಳುಹಿಸುವೆನು, ನೀನು ಆತನೊಡನೆ ಇದಕ್ಕೆ ಸಂಬಂಧಪಟ್ಟ ಸಂಗತಿಗಳನ್ನು ಮಾತನಾಡಿ ಸೂಕ್ತ ವಾದುದನ್ನು ಸರಿಪಡಿಸು. ಇಂದಿರಾ-ಹಾಗೆಯೇ ಆಗಲಿ, ಶರಚ್ಛಂದನು ನಿ ರ್ದೋಷಿಯೆಂದು ಆತನಿಗೆ ಒಪ್ಪಿಸುವೆನು. ಅಮರನು ಮುಂದೆ ಯಾವ ಮಾತನ್ನೂ ಆಡಲಿಲ್ಲ. ಇಂದಿರೆಯ ನಾಚಿಕೆಯಿಂದ ಅನೇಕ ಸಂಗತಿಗಳನ್ನು ಹೇಳ ಲು ಸಮರ್ಥಳಾಗಲಿಲ್ಲ. ಲಜ್ಞೆಯೆಂಬುದು ಲೋಕದಲ್ಲಿ ಸ್ತ್ರೀ ಚಾತಿಗೆ ಸಾಮಾನ್ಯವಾದುದು. ಲಜ್ಜೆ ಮೂಡನೆ ಪ್ರಣಯವು ಸೇರಿದರೆ ಫಲಿತಾಂಶವು ಅನುಭವೈಕವೇದ್ಯವಾಗುವುದು, ತನ್ನ ಪ್ರಣಯಾಕಾಂಕ್ಷಿಯಾದ ಶರಚ್ಚಂದ್ರನಿಗೆ ಬಂದೊದಗಿರುವ ವಿಪತ್ತನ್ನು ಹೋಗಲಾಡಿಸುವುದಕ್ಕೆ ಅಂದಿರೆಯು ಮಾಡಿದ ಸಾಹಸವು ಇತರರಿಂದ ತೋರಿಸುವುದಕ್ಕೂ ಆಗುವುದಿಲ್ಲ; ನಮ್ಮಿಂದ ವರ್ಣಿಸುವುದಕ್ಕೂ ಆಗುವುದಿಲ್ಲ, ಪ್ರೀತಿಯೇ ಲೋಕದಲ್ಲಿ ಉತ್ತಮವಾದುದು, ಪ್ರೀತಿಯೇ ಎಲ್ಲವನ್ನೂ ಜ ಯಿಸುವುದು ಎಂಬುದು ನಮ್ಮಿಂದ ರಚಿತವಾಗಿರುವ ಪ್ರೀತಿವಿ ಜಯವೆಂಬ ಗyಂಥದಲ್ಲಿ ವಿಶದವಾಗಿ ವರ್ಣಿತವಾಗಿರುವುದು. ಪ್ರಥಮ ಖಂಡ ಸಂಪೂರ್ಣ