ಪುಟ:ಚೋರಚಕ್ರವರ್ತಿ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಣ ನನ್ನು ನೋಡಿ-ಸ್ವಾಮಿ, ನಾನು ತಮ್ಮನ್ನು ನೋಡಿ ಬಹಳ ಕಾಲ ವಾಯಿತು. ಈ ಅಪರಾಧವನ್ನು ಕ್ಷಮಿಸಬೇಕು, ಎಂದನು. ಅವು ರನು ಈ ಮಾತಿಗೆ ಏನೊಂದುತ್ತರವನ್ನೂ ಕೊಡದೆ, ಶರತ್ಮದ್ರನ ಅಣ್ಣನಿಂದ ಬಂದ ತಂತಿಯವರ್ತಮಾನನವನ್ನು ಆತನ ಕೈಗೆ ಕೊಟ್ಟುಇದರಿಂದ ತಮಗೆ ಏನು ತಿಳಿದುಬರುವುದೋ ನೋಡಿರಿ, ಎಂದನು. ಅರಿಂದವನು ಅ ವರ್ತಮಾನವನ್ನು ಓದಿದನು. ಅವನ ಮುಖದಲ್ಲಿ ವಿಷಾದರೇಖೆಯೊಂದು ಕಾಣಿಸಲಾಗಿ, ಅವರು ಅದರ ಕಾರಣವನ್ನು ತಿಳಿಯಲು ಬಹಳ ಆತುರನಾದನು. ಅರಿಂದಮನು ಕಾಗದವನ್ನು ಓದಿ- ಇದರಿಂದ ಸ್ಪಷ್ಟವಾಗಿ ಯೆ: ಗೊತ್ತಾಗುವುದು, ಎನಲಾಗಿ, ಅವರನು- ನನಗೂ ಹಾಗೆಯೇ ತೋರುವುದು, ಇದನ್ನು ನೋಡಿದಾಗಿನಿಂದಲೂ ನನಗೇನೋ ಬಹ ಆ ವ್ಯಸನವುಂಟಾಗಿರುವದು, ಎಂದನು. ಅರಿಂದಮು- ವ್ಯಸನಗೇತಕೆ ? ಶರಚ್ಚಂದ್ರನು ಅಪರಾಧಿಯೆಂ ಬುದನ್ನು ಕೇಳುವುದು ನಿಮಗೆ ಇಷ್ಯವಿಲ್ಲವೆನೋ ? ಅಮರ-ನನ್ನ ಇಷ್ಟಾನಿಷ್ಟಗಳು ಕೆಲಸಕ್ಕೆ ಬಾರವು, ಅಸ ರಾಧಿಯಾರೆಂಬುದನ್ನು ತಾವೇ ಕಂಡುಹಿಡಿಯಬೇಕು. ಒಂದುವೇಳೆ ಶರತ್ತೆ ಅಪರಾಧಿಯಾಗುವುದಾದರೆ, ನನ್ನ ಹೃದಯವು ತತ್ತರಗುಟ್ಟು ವುದು, ಅರಿಂದಮು-ಈ ವರ್ತಮಾನದಿಂದ ತಮಗೆ ತೋರಿಬರು ವುದೇನು ? ಅಮರ-ಇಷ್ಟಾದರೂ ಶಟ್ಟಂದ್ರನು ಸಿರ್ಗೋಪಿಯೆಂಬು ಗೇ ನನ್ನ ಅಭಿಪ್ರಾಯ. ಅರಿಂದಮುಶರಚ್ಚಂದ್ರನು ನಿರ್ದೊನ್ನಿಯೆಂಬುದಕ್ಕೆ ಪ್ರಮಾ ಣಬೇಕಾಗಿರುವುದೇನೋ ?