ಪುಟ:ಚೋರಚಕ್ರವರ್ತಿ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೆಂಗಸು-ಅಪರಾಧವೆಂದರೇನು ? ಅಪರಾಧಿಗಳಾರು? ನಾನು ಯಾರಿಗೆ ಸಹಾಯಳು ? ಅರಿಂದಮ-ಎಲ್ಲವನ್ನೂ ನಿನಗೆ ಹೇಳಲು ಕಾರಣವಿಲ್ಲ. ನಿನ್ನನ್ನು ದಸ್ತಗಿರಿ ಮಾಡಿ ಕಾರಣವನ್ನು ತಿಳಿಸುವೆನು, ಈಗ ರಾಮರತ್ನನು ಎಲ್ಲಿ ವನು, ಹೇಳು ? ಆ ಹೆಂಗಸು ನಾಚಿಕೆಯಿಂದ ತಲೆಯನ್ನು ಬಗ್ಗಿ ನಿಕೊಂಡು ಸ್ವಾಮಿ, ರಾಮರತ್ನನು ನನ್ನಲ್ಲಿಯೇ ಇರುವನು, ಎಂದಳು. ಅರಿಂದಮ-ನೀನು ಆತನಿಗೆ ವಿವಾಹಿತಳಾದವಳೇನು ? ಹೆಂಗಸು-ಅಲ್ಲ, ಆತನು ನನ್ನನ್ನು ವಿವಾಹ ಮಾಡಿಕೊಳ್ಳಬೇ ಕಂದಿದವನು. ಅರಿಂದಮ-ಇದು ನಿನ್ನ ಸ್ವಂತಮನೆಯೋ ? ಹೆಂಗಸು-ಅಲ್ಲ, ಇದು ನನ್ನ ತಾಯಿಯ ಮನೆ. ನನ್ನ ತಾಯಿಗೆ ನಾನೊಬ್ಬಳೇ ಮಗಳು. ಅರಿಂದಮ..ನೀನೇನು ಕೆಲಸ ಮಾಡಿಕೊಂಡಿರುವೆ ? ಹೆಂಗಸು ನಾನೇನು ಮಾಡಿಕೊಂಡಿರಲಿ ? ಅರಿಂದಮ.ಜೀವನ ನಡೆವುದು ಹೇಗೆ ? ಹೆಂಗಸು-ನಾನೊಂದು ನಾಟಕದಲ್ಲಿ ನರ್ತಕಿಯು, ಅದ ಕ್ಯಾಗಿ ನನಗೆ ಸಂಬಳವಿರುವುದು. ಅರಿಂದಮ-ನಿನಗೂ ರಾಮರತ್ನನಿಗೂ ಪ್ರಥಮ ಪರಿಚಯ ವಾದುದು ಹೇಗೆ ? ಹೆಂಗಸು-ನಾಟಕಮಂದಿರದಲ್ಲಿಯೆ. ಅರಿಂದಮ-ನಿನ್ನನ್ನು ಮಾತನಾಡಿಸಲು ಆತನಿಗೆ ಧೈವು? ಟಾದ ಬಗೆ ಹೇಗೆ ? ಹೆಂಗಸು-ನಾಟಕದ ನರ್ತಕಿಯರನ್ನು ಮಾತನಾಡಿಸುವುದಕ್ಕೆ