ಪುಟ:ಜಗನ್ಮೋಹಿನಿ .djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* v * * * * * * * * * * ಪದ್ಮದ್ವೀಪ ೯೧ ವೃಷ್ಟಿಯ, ಮಧ್ಯಾಹ್ನದ ಹೊತ್ತಿನಲ್ಲಿ ಮೇಘಗಳ ಆಡಂಬರವೂ, ಬೇಸಿಗೆ ಕಾಲದಂತೆ ಬಿಸಲಿನಬೇ ಗೆಯ, ಸಾಯಂಕಾಲದಲ್ಲಿ ನಿರ್ಮಲವಾದ ಆಕಾಶವೂ, ರಾತ್ರಿ ವೇಳೆ ಮತುಧರ್ಮಕ್ಕೆ ಅನು ಗುಣವಾಗಿ ಕಳೆಯೇರಿ ಬೆಳಗುತ್ತಿದ್ದ ಬೆಳದಿಂಗಳೂ, ಕಾಣುತ್ತಿದ್ದು ವಲ್ಲದೆ ಸಸ್ಯಕ್ಕೆ ಆಪ್ಯಾಯನವಾದ ದೃಷ್ಟಿಯು ಬರಲೇ ಇಲ್ಲ. ಮುಂಗಾರು ಪುಗೆಇನ್ನೂ ಒಂದೆರಡು ಹದ ಮಳೆ ಬೇಕಾಗಿದ್ದಿ ತು; ಹಿಂಗಾರು ಪೈರುಗಳು ಮಾತ್ರ ಇನ್ನು ಕೆಲವು ದಿನಗಳು ಮಳೆ ಬಾರದೇ ಹೋದರೆ, ಸುತರಾ ಒಣಗಿಹೋಗುವ ಸ್ಥಿತಿಯಲ್ಲಿ ದ್ದುವು. - ಈ ಸಮಯದಲ್ಲಿ ಮಹಾರಾಣಿಯು ವೃಷ್ಟಿ ಪ್ರದವಾದ ಯ ಜ್ಞಾದಿಗಳನ್ನು ಮಾಡಿಸುವುದಕ್ಕೋಸ್ಕರವಾಗಿ ಪ್ರಚಾ ಪ್ರತಿನಿಧಿ ಗಳನ್ನೆಲ್ಲಾ ಕರೆಯಕಳುಹಿಸಿದ್ದಳು. ಮಧ್ಯಾಹ್ನ ಸುಮಾರು ಮೂರು ಘಂಟೆಯ ಹೊತ್ತಿಗೆ ಪರ ಜನರೆಲ್ಲರೂ ಅರಮನೆಯ ಆಸ್ಥಾನ ಮಂಟಪದ ಸುತ್ತಮುತ್ತಲೂ ಮಹಾರಾಣಿಯ ಆಗಮನವನ್ನು ನಿರೀಕ್ಷಿಸಿಕೊಂಡು ನೆರೆದಿದ್ದರು. ಆದಿನ ರಾಣಿವಾಸದಲ್ಲಿ ಪುರಾಣಿಕರು ಸೀತಾ ಕಲ್ಯಾಣವನ್ನು ಹೇಳು ತಿದ್ದುದರಿಂದ ಮಹಾರಾಣಿಯು ಬರುವುದಕ್ಕೆ ಇನ್ನೂ ಕೊಂಚ ಹೊತ್ತಾಗಬಹುದೆಂದು ಅಲ್ಲಿಯ ಜನರು ಅಂದುಕೊಳ್ಳುತ್ತಿದ್ದರು. ಈ ಸಮಯದಲ್ಲಿ, ವೃದ್ದ ತಪಸ್ವಿಗಳಿಬ್ಬರು ನೆಟ್ಟಗೆ ಅರಮನೆಯ ಮಹಾದ್ವಾರದಮುಂದೆ ಬಂದು ನಿಂತರು. ಅವರನ್ನು ಕಂಡಕೂ ಡಲೇ, ದ್ವಾರಪಾಲಕನು ಆ ಸುದ್ದಿಯನ್ನು ಮಹಾರಾಣಿಗೆ ಅರಿಕೆ ಮಾಡಿದನು, ಒಡನೆಯೇ ರಾಣಿಯು ಬಂದು ಅವರುಗಳಿಗೆ ಅಭಿ ವಂದಿಸಿ, ಅವರುಗಳ ಪಾದರಜಸ್ಸನ್ನು ಕಣ್ಣಿಗೆ ಸವರಿಕೊಂಡು, ಅವರುಗಳನ್ನು ಮನ್ನಣೆಯಿಂದ ಮನೆಯೊಳಕ್ಕೆ ಕರೆದು ಕೊಂಡು