ಪುಟ:ಜಗನ್ಮೋಹಿನಿ .djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೩ ಪದ್ಮದ್ವೀಪ ಜಗನ್ನೊ ಹಿನಿ:-ಪ್ರಾಣಿವರ್ಗಕ್ಕೆ ಆಕಾರವು ಪೈತೃಕ ವೆಂತಲೂ ಬುದ್ದಿ ಯು ಕರ್ಮಾನುಗುಣವಾದುದೆಂತಲೂ ಶಾಸ್ತ್ರ ಸಿದ್ದ ವಾಗಿಲ್ಲವೆ ? ಕುಶನಾಭ:-ಸಾಧು ! ಸಾಧು !! ನಿನ್ನ ಸಂಸ್ಕಾರವು ಬಹಳ ಶ್ಲಾ ಫ್ಯವಾಗಿದೆ. ಈ ದಿನ ನಿನ್ನನ್ನು ನೋಡಿದ್ದರಿಂದ ನನಗೆ ಬಹಳ ಸಂತೋಷವಾಯಿತು-ಪೂಜ ರಾದ ಅರವಿನ್ದ ಬಾನ್ದ ವರನ್ನು ನೋಡಿದಂತೆ ಆಯಿತು. ಜಗನ್ನೊ ಹಿನೀ:-ತಾತ, ತನ್ನ ತಪಸ್ಸು ನಿರ್ವಿಘ್ನವಾಗಿ ನಡಿಯುತ್ತಿದೆಯೆ ? ಕುಶನಾಭ:-ಸರ್ವ ವಿಘ್ನ ವಿನಾಶಕರಾದ ನಮ್ಮ ಗುರು ಗಳು ಸರ್ವ ದಾ ನಮ್ಮ ಹೃದಯದಲ್ಲಿರುವಾಗ ನಮಗೆ ವಿಘ್ನ ವೆಲ್ಲಿಯದು ? ಜಗನ್ನಿಹಿನೀ:- ತಾತ, ತಾವುಗಳು ಇಬ್ಬರೂ ತಮ್ಮ ಗಳ ನಿರಂತರವಾದ ತಪಸ್ಸನ್ನು ಬಿಟ್ಟು, ಅಕಸ್ಮಾ ತ್ಯಾಗಿ, ಏಕ ಕಾಲ ದಲ್ಲಿ, ಅಶ್ವಿನೀ ದೇವತೆಗಳಂತೆ, ಈ ದಾಸಳನಿವಾಸಕ್ಕೆ ಬಿಜಮಾಡಿದ ಕಾರಣವನ್ನು ತಿಳಿಯಬೇಕೆಂದು ನನ್ನ ಮನವು ಆತುರಪಡುತ್ತಿದೆ. ಕುಶನಾಭ, ವತ್ತೆ, ನಮ್ಮ ಗುರುಸಮಾನರಾದವರ ಪುತ್ರಿಯಾದ ನಿನ್ನ ಯೋಗಕ್ಷೇಮವನ್ನು ವಿಚಾರಿಸು ವುದು ನಮ್ಮ ಕರ್ತವ್ಯವಲ್ಲವೆ ? ಜಗನ್ನೊ ಹಿನಿ-ನಮ್ಮ ತೀರ್ಥರೂ ಪರ ತರುವಾಯ ತಾವುಗಳಲ್ಲ ದೇ ಈ ಅನಾಥಳ ಯೋಗಕ್ಷೇಮವನ್ನು ವಿಚಾರಿ ಸುವವರಾರು ? ಕುಶನಾಭ:- ನಿನ್ನನ್ನು ಸನಾಥಳನ್ನಾಗಿ ಮಾಡಬೇಕೆಂಬು ದೇ ನನ್ನ ಉದ್ದೇಶ.