ಪುಟ:ಜಗನ್ಮೋಹಿನಿ .djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಮ್ಪತ್ತನೆಯ ಪ್ರಕರಣ. ಸ್ವಾನುರಾಗ, ಸರಿರಾತ್ರಿಯ ಸಮಯವಾಗಿದೆ: .. ಪದ್ಯ ದ್ವೀಪವು ನಿದ್ರಾ ಮಹಾರಾಣಿಯ ಆಳ್ವಿಕೆಯಲ್ಲಿ, ಕಾಮ, ಕ್ರೋಧ, ಲೋಭ, ಮೋಹ ಮದ, ಮತ್ಸರಗಳನ್ನು ಮರೆತು ಸುಖ ದುಃಖಗಳನ್ನೂ ಆಧಿ ವ್ಯಾಧಿಗಳನ್ನೂ ಲೆಕ್ಕಿಸದೇ, ಸಮಾಹಿತ ಚಿತ್ರರಾದ ಮುನಿಜ ನರ ಮನೋವೃತ್ತಿಯನ್ನೆ ಪ್ರಶಾನ್ಯ ವಾಗಿದ್ದಿ ತು. ಪತ್ತನದ ಕಾವಲುಗಾರರು ರಾಜಬೀದಿಗಳಲ್ಲಿ ಹೆಜ್ಜೆ ಹೆಜ್ಜೆ ಗೂ ನಿದೆ ಯೊಂದಿಗೆ ಹೆಣಗಾಡುತ್ತಾ ತಮ್ಮ ತಮ್ಮ ಕಾರ್ಯಗಳಲ್ಲಿ ಅಪ್ರಮತ್ತರಾಗಿದ್ದರು. ಆಗ ಬಾನ್ನ ಳದಲ್ಲಿ ಇದ್ದನು ಬೆಳಗುತ್ತಿದ್ದಾಗ್ಯೂ ಮೋಡ ವಾಡುತ್ತಿದ್ದು ದರಿಂದ ಬೆಳದಿಂಗಳು ಅಷ್ಟು ಶೋಭಾಯಮಾನ ವಾಗಿರಲಿಲ್ಲ. ಅರಮನೆಯ ಚನ್ದ್ರ ಶಾಲೆಯ ಮೇಲಿನ ದೀಪಾವಳಿ ಗಳು ರಾಜಮಾರ್ಗದಲ್ಲಿ ನಿಂತು ನೋಡುವವರ ಕಣ್ಣಿಗೆ ಭೂ ಮ ಇಲಕ್ಕೆ ಇಳಿಯುತ್ತಿರುವ ನಕ್ಷತ್ರ ಮಣ್ಣಲದಂತೆ ಕಂಗೊಳಿಸು ತಿದ್ದುವು. - ಈ ಶಾಲೆಯ ನಟ್ಟ ನಡುವೆ ಅತಿ ರಮಣೀಯವಾಗಿದೆ ಶಯ್ಯಾಗೃಹ ಒಂದಿದ್ದಿತು. ಮಳೆಗಾಲವಾದುದರಿಂದ ಇದರ ಕಿಟಕಿಗಳ ಕನ್ನಡಿಯ ಕದಗಳೆಲ್ಲವೂ ಮುಚ್ಚಲ್ಪಟ್ಟಿದ್ದು ವು. ಇದರ ಸುತ್ತಲೂ ಬಿಚ್ಚು ಕತ್ತಿಯ ಕಾವಲುಗಾರರು ಒನಿನಮೇಲೆ ತಿರು ಗಾಡುತ್ತಿದ್ದರು.