ಪುಟ:ಜಗನ್ಮೋಹಿನಿ .djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪ ಜಗನ್ನೊ ಹಿನೀ,

  • * * * * * * * * * * - -

- - - ..

  • * * * * * *

ಚಾರಿಯನ್ನು ಎಚ್ಚರಗೊಳಿಸೋಣವಾಗಲಿ, ' ಎನ್ದ ರು. ಕುಶ ನಾಭರು ಮುಗುಳು ನಗೆಯಿಂದ ಅವನನ್ನು ನೋಡಿದರು. ಕೂಡಲೆ ರವಿವರ್ಮನು ಎರಗೊಂಡು ಕಣ್ಣು ಬಿಟ್ಟು ತಟ್ಟನೆ ಮಂಚದಮೇಲೆ ಎದ್ದು ಕುಳಿತು ಕಕು ಬಿಕ್ಕಿಯಾಗಿ ದಿಕ್ಕು ಗಳನ್ನು ನೋಡಿ ಕೆಳಗಿಳದು ಸುತ್ತಮುತ್ತಲೂ ಓಡಾಡಿ “ ಏನಿದಾಶ್ಚರ್ಯ ! ಆ ಕುಶನಾಭರೆ ತಪೋವನವೆಲ್ಲಿ ? ಆ ಮಹಾ ಯೋಗಿಗಳೆಲ್ಲಿ ? ವೇದಾಭ್ಯಾಸವನ್ನು ಮಾಡುತ್ತಿದ್ದ ಪರಮ ದಯಾಳುಗಳಾದ ಆ ಬ್ರಹ್ಮಚಾರಿಗಳೆಲ್ಲಿ ? ಈ ದಿವ್ಯಭವನವಾರದು! ಅಹಹ ! ಈ ಭೂ ಮಣ್ಣಲದಲ್ಲಿ ನಾನಿಂ ತಹ ಮನೋಜ್ಞ ವಾದ ಭವನವನ್ನು ಎಲ್ಲಿಯೂ ನೋಡಲಿಲ್ಲ. ಈ ರತ್ನ ಮಯವಾದ ಕಷ್ಟಗಳನ್ನೂ ಚನ್ದಮಣ್ಣಲದ ಸೌಮ್ಯವಾದ ಈ ದೀಪ ಗಳನ್ನು ಹಿಡಿದುಕೊಂಡು ನಿಂತಿರುವ ಸ್ಪಟಿಕ ಶಿಲಾಪ್ರತಿಮೆಗ ಳನ್ನೂ ಮಾನವ ಶಿಲ್ಪಕಾರನು ನಿರ್ಮಿಸಲಾಪನೆ ? ಎನ್ನು ಮು ಸ್ಥರಿದು ಆ ಪ್ರತಿಮೆಗಳನ್ನು ನಿಟ್ಟಿಸಿ ನೋಡಿ “ಆಹಾ ! ಇವು ಗಳನ್ನು ಪ್ರತಿಮೆಗಳು ಎನ್ನ ಬಹುದೇ ? ಗಂಧರ್ವ ಕನೈಯರಂತೆ ಮನ್ದ ಹಾಸದಿಂದ ನನ್ನೊ ಡನೆ ಮಾತನಾಡಲು ಮುನ್ನರಿಯುವಂತೆ ಕಾಣುತ್ತಿವೆಯಲ್ಲಾ ! ಇದೇನಾಶ್ಚರ್ಯ! ಓಹೋ ! ಪುರಾಣೇತಿ ಹಾಸಗಳಲ್ಲಿ ವರ್ಣಿಸಲ್ಪಟ್ಟ ಇಂದ್ರಭವನವೆಂಬುದು ಇದೇ ಆಗಿರ ಬಹುದು, ಛ 1 ಛೇ ! ಮರುಳೆ ! ನರನೆಲ್ಲಿ ಸುರಲೋಕವೆಲ್ಲಿ! ಆ ಇಂದ್ರಭವನವನ್ನು ಬಲ್ಲವರಾರು ? ಎಂದು ಆ ಭವನದ ಗೋಡೆಗಳ ಮೇಲೆ ಬರೆಯಲ್ಪಟ್ಟಿದ್ದ ಚಿತ್ರಗಳನ್ನು ನೋಡಿ “ಆಹಾ ! ಇಲ್ಲಿ ಮಹಾವಿಷ್ಟ ವಿನ ದಶಾವತಾರಗಳು ಎಷ್ಟು ಹೃದಯಂಗಮವಾಗಿ ಚಿತ್ರಿಸಲ್ಪಟ್ಟಿವೆ ! ಏಕಕಾಲದಲ್ಲಿ, ಪ್ರಜ್ಞಾ ದನಿಗೆ ಆಹ್ಲಾದಕರವಾಗಿಯ ಹಿರಣ್ಯಕಶಿಪುವಿಗೆ ಹೃದಯಭೇದಕ