ಪುಟ:ಜಗನ್ಮೋಹಿನಿ .djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಪ್ಯಾನುರಾಗ ೧೧೫ /n\r\r\nnnn\ Nysh. \n\r\n\\ \r\n \n ಹಾರಾಡುತ್ತಿದ್ದ ಸಾರಿಕಾದಿ ಪಕ್ಷಿಗಳ ಕಾಕಲಿಯು, ಆಗಾಗಲೇ ಸ್ನಾನ ಮಾಡಿ ಸಾಮವೇದವನ್ನು ಗಾನಮಾಡುತ್ತಿದ್ದ ವಟುಗಳ ಮನೋಹರ ವಾದ ಕಂಠ ಸ್ವರಕ್ಕೆ ಹಿಂಮೇಳದಂತೆ ಕೇಳಬರುತ್ತಿದ್ದಿತು. ನಮ್ಮ ರಾಜಕುಮಾರನಿಗೆ ಆ ರೀತಿಯಾಗಿ ಜಾಗರವಾಗಿ ಬ್ಲಾಗ್ಗೂ ಆ ತಪಸ್ವಿಗಳ ಗದ್ದಲದಿಂದ ಕು ಪ್ರಕಾಲಕ್ಕೆ ಮುಂಚಿತವಾ ಗಿಯೇ ಎಚ್ಚರವಾಯಿತು, ರವಿವರ್ಮನು ಎದ್ದೊಡನೆಯೇ ಏನನ್ನೂ ಕಳೆದು ಕೊಂಡ ವನಂತೆ ಆ ಪರ್ಣಶಾಲೆಯ ಒಳಗೂ, ಹೊರಗೂ, ಸುತ್ತಮುತ್ತಲೂ ಅಲ್ಲಿದ್ದ ತಪಸ್ವಿಗಳನ್ನೂ ತನ್ನ ಪರಿವಾರವನ್ನೂ ನೋಡಿದನು ಸ್ವಾ ಭಾವಿಕವಾಗಿ, ಅರಳುತ್ತಿದ್ದ ಕೆಂದಾವರೆಯಂತೆ ಸುಂದರವಾಗಿದ್ದ ಇವನ ಮುಖವು ಅಂದಗೆಟ್ಟು ವಿಕಾರವಾಗಿದ್ದಿತು; ಕಣ್ಣುಗುಡ್ಡು ಗಳು ಕೆಂಪಾಗಿದ್ದವು; ಕಡೆಗಣ್ಣುಗಳು ಸಂಕುಚಿತವಾಗಿದ್ದುವು; ಮೂಗು ಮಿಣುಗುಟ್ಟುತ್ತಿದ್ದಿತು, ಕಪೋಲಗಳು ಕಳೆಗುಂದಿ ಬೆಳ್ಳಗಾಗಿದ್ದುವು. ಸುಮಂತ್ರನು ರವಿವರ್ಮನ ಅಲಸ್ಯಕ್ಕೂ ವಿಕಾಸಕ್ಕೂ ಕಾರಣ ವನ್ನು ಕಾಣದೇ, ತಟ್ಟನೆ ವಿಚಾರಿಸಲು ಮನಬಾರದೇ, ಒಂದೂ ತೋಚದೆ (ಒಡನೇ, ಈ ದಿನ ಬೆಳಗಿನಜಾವದಲ್ಲಿಯೇ ಇಲ್ಲಿಂದ ಪಯಣಮಾಡಬೇ ಕೆಂದು ನಿನ್ನೆ ನಿಶ್ಚಯಿಸಿಕೊಂಡಿರಲಿಲ್ಲವೆ ? ನೀನಗೇಕೆ, ಇಷ್ಟು ಹೊತ್ತಾ ದರೂ ಸುಮ್ಮನೇ ಇರುವೆ ? ಎಲ್ಲವೂ ಸಿದ್ಧವಾಗಿದೆ ; ನಡೆ ಹೊರ ಡೋಣ. ಎಂದನು. ರವಿವರ್ಮನು ಅದಕ್ಕೆ ಶೂನ್ಯ ದೃಷ್ಟಿಯಿಂದ, 'ಆ ದಿವ್ಯ ಭವ ನವು ಇಲ್ಲಿಗೆ ಎಷ್ಟು ದೂರದಲ್ಲಿದೆ ?” ಎಂದು ಕೇಳಿದನು. ಸುಮಂತ್ರ :-ದಿವ್ಯಭವನವಾವುದು ?