ಪುಟ:ಜಗನ್ಮೋಹಿನಿ .djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೬ vvvvvv ಜಗನ್ನೊಹಿನಿ. ರವಿವರ್ಮ :- ನಾನು ಅಲ್ಲಿಂದ ಹಿಂದಿರುಗಿ ಬಂದುದು ಹೇಗೆ ? ಸುಮಂತ್ರ:ಮಹಾರಾಜನೇ, ಮನ್ನಿಸಬೇಕು ; ನೀನದೇಕೆ ಈ ದಿನ ಇಷ್ಟು, ಅಸಂಬದ್ಧವಾಗಿ ಮಾತನಾಡುತ್ತಿರುವೆ ? ನೀನಿನ್ನೂ ನಿದ್ದೆಗಣ್ಣಿನಲ್ಲಿರುವಂತಿದೆ. ನಿನ್ನೆ ರಾತ್ರಿ, ವಟುಗಳ ವೇದಾಧ್ಯಯ ನದ ಗಲಭೆಯಲ್ಲಿ ನಿನಗೆ ಚನ್ನಾಗಿ ನಿದ್ರೆ ಬಂದಹಾಗೆ ಕಾಣುವುದಿಲ್ಲ. ಅತ್ತನೋಡು ; ಆಗಲೇ ಹೊತ್ತೇರಿತು ; ಇನ್ನು ಹೊತ್ತು ಗಳೆಯಲಾ ಗದು. ನಡೆ ಹೊರಡೋಣ” ಎಂದು ಆತನ ಪ್ರಯಾಣದ ಉಡುಗೆ ತೊಡುಗೆಗಳನ್ನು ಆತನ ಕೈಗೆ ಕೊಟ್ಟನು. ರವಿವರ್ಮನು ಅವುಗಳನ್ನು ತೆಗೆದುಕೊಂಡು ಬೇಸರದಿಂದ ಉಟ್ಟು ತೊಟ್ಟು ಮಾತನಾಡದೇ ಆಶ್ರಮವನ್ನು ಬಿಟ್ಟು ಮುಂದಕ್ಕೆ ಪ್ರಯಾಣಮಾಡಿದನು, ಅವನ ಹಿಂಬಾಲಕರೂ ಅವನನ್ನು ಹಿಂಬಾ ಲಿಸಿದರು. --೦-- ಹತ್ತನೆಯ ಪ್ರಕರಣ, ಒಳ ಸ೦ ಚು . ಶರತ್ಕಾಲವು ತಲೆದೋರಿತು: ಸ್ವಭಾವವು ಶರದೃತುವಿನಲ್ಲಿ ಶೋಭಿಸು ವಂತೆ ಮತ್ತಾವ ಋತುವಿನಲ್ಲಿಯೂ ಶೋಭಿಸುವುದಿಲ್ಲ, ಹೇಮಂತ ವಸಂತ ಮುಂತಾದ ಋತುಗಳೂ ತಮ್ಮ ತಮ್ಮ ಅಸಾಧಾರಣವಾದ ಫಲಪುಷ್ಪ ಮೊದಲಾದವುಗಳಿಂದ ಮನೋಜ್ಞವಾಗಿದ್ದಾಗ್ಯೂ ಅವುಗಳಲ್ಲಿ ಜನಗಳಿಗೆ ಅಸಹ್ಯವಾದ ಕೆಲ ಗುಣಗಳು ಇದ್ದೇ ಇವೆ. ಶರದೃತುವಿ