ಪುಟ:ಜಗನ್ಮೋಹಿನಿ .djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೮ ಜಗನ್ನೊ ಹಿನಿ. MMwwwv Avvvvvvvvvvv vvvvvvvvvvy ಕಳ್ಳರ ಹೆದರಿಕೆಯು ಹೆಚ್ಚಾಗಿದ್ದುದರಿಂದ ಹೊಸಬರನ್ನು ಕಂಡರೆ ಕಾತರಿಸುತ್ತಿದ್ದರು. ಮೂರು ಸಂಜೆಯಹೊತ್ತಿನಲ್ಲೊಂದುದಿನ ಇವರ ನೋಟಕ್ಕೆ ಅಪೂರ್ವನಾದ ಪುರುಷನೊಬ್ಬನು ವಿಷಯನಾದನು. ಈತನ ಆಕಾರವು ನಿಡುವಾಗಿಯ, ಗಡುತರವಾಗಿಯೂ ಇ ದ್ವಿತು; 'ಇವನು ತನ್ನ ಕೆನ್ನೆ ಮಾಸೆಗಳನ್ನು ಎಡಗೈ ಬೆರಳುಗಳಿಂದ ಕೆದ ರಿಕೊಳ್ಳುತ್ತಿದ್ದನು; ಬಲಗೈಯಲ್ಲಿ ಕುದುರೆಯ ಸವಾರನಂತೆ ನಿಡುವಾದ ಚಾವಟಿಯನ್ನು ಹಿಡಿದುಕೊಂಡಿದ್ದನು; ಕಿನಕಾಪಿನ ಕವಚವನ್ನೂ ಪಾ ಯಿಜಾಮೆಯನ್ನೂ ಹಾಕಿಕೊಂಡಿದ್ದನು ತಲೆಗೆ ಚಂಗಾವಿಯಪೇಟವನ್ನು ಬೆನ್ನ ಮೇಲೆ ಬಾರುದ್ದ ಚುಂಗುಬಿಟ್ಟು ನೀಟಾಗಿ ಸುತ್ತಿಕೊಂಡಿದ್ದನು. ಇವನು ದಾರಿಗಾಣದವನಂತೆ ಹಳ್ಳಗಳನ್ನೂ, ತಿಟ್ಟುಗಳನ್ನೂ ದಾಟಿ ಕೊಂಡು ಕಣ್ಣ ಕಣ್ಣ ಗಿಡಗಣ್ಣಿಗಳನ್ನು ಚಾವಟೆಯಿಂದ ಹೊಡೆ ಯುತ್ತಾ ಮಿಗುಲುವೇಗದಿಂದ ಮುಂದರಿದು ಹೋಗುತ್ತಿದ್ದನು. ನೋಡುತ್ತಿದ್ದ ಹಾಗೆಯೇ ಇವನು ಅಲ್ಲಿ ಬಿದ್ದು ಇಲ್ಲಿ ಬಿದ್ದು ರಾಜ ಮಾರ್ಗಕ್ಕೆ ಹೋಗಿಸೇರಿದನು , ಅಲ್ಲಿ ದಾರಿಗಡ್ಡವಾಗಿ ಕಟ್ಟಲ್ಪಟ್ಟಿದ್ದ ಸಣ್ಣದೊಂದು ಸೇತುವೆಯ ಎಡಪಾರ್ಶ್ವದ ಮೋಟುಗೋಡೆಯ ಕಡೆಯಕಲ್ಲಿನಮೇಲೆ ಕಾಲುಗಳನ್ನು ಇಳಿಬಿಟ್ಟು ಕೊಂಡು ಕೂತು ಕರವಸ್ತ್ರದಿಂದ ಕಾಲಗಳ ಮೇಲಣ ಧೂಳೆ ಯನ್ನು ಜಾಡಿಸುಕೊಂಡು ಸುತ್ತುಮುತ್ತಲೂ ನೋಡಿ ಆ ಮಾರ್ಗದ ಮಗ್ಗುಲಲ್ಲಿ ಕಾಣುತ್ತಿದ್ದ ಮಾವಿನ ತೋಪಿನ ಕಡೆಗೆ ಹೊರಟನು. ಆ ತೋಪಿನಮಧ್ಯೆ ಮರಗಳ ಮರೆಯಲ್ಲಿ ಹಾಳುಮಣ್ಡಪ ಒಂ ಡಿದ್ದಿತು. ಇದರ ಮುನ್ನುಗಡೆ ಕಲ್ಲು ಕಟ್ಟಿದ ದೊಡ್ಡದೊಂದು ಕೊಳ