ಪುಟ:ಜಗನ್ಮೋಹಿನಿ .djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(AANNAN \\\r\AAAAAAAN////AAAAAAAAM ೧೨೦ ಜಗನ್ನೋಹಿನಿ. ವಿರಾಮವಾಗುವುದಿಲ್ಲವೆಂಬುದು ನಿನಗೆ ಗೊತ್ತೇ ಇದೆ. ಸಾಕಾ ಲವು ಇನ್ನೂ ಅತಿಕ್ರಮಿಸಲಿಲ್ಲ. ಅದೋ ನೋಡು ಸೂರ್ಯನು ಈಗ ತಾನೆ ಮುಣುಗುತ್ತಿದಾನೆ. ಮೇಲಾಗಿ, ತಪ್ಪಿತವೆಲ್ಲವೂ ನಿನ್ನ ದಾ ಗಿರುವಾಗ ಬಂದು ನನ್ನ ಮೇಲೆ ಕೋಪಿಸಿಕೊಳ್ಳುವುದೇಕೆ? ನಿನ್ನ ಕಟ್ಟಾ ಜ್ಞೆಯಂತೆ ನಾನು ಹೊಟ್ಟೆಗಿಲ್ಲದೇ, ಬಟ್ಟೆ ಬರೆ ಇಲ್ಲದೇ ದಿಗಮ್ಬರನಾಗಿ ಹೀಗೆ ಕತ್ತೆಯಂತೆ ಬೂದಿಯಲ್ಲಿ ಬಿದ್ದು ಹೊರಳಾಡುತ್ತಾ ಈ ಹೆಣಭಾ ರದ ರುದ್ರಾಕ್ಷ ಮಾಲೆಗಳನ್ನು ಕತ್ತಿನ ಮೇಲೆ ಹೊತ್ತುಕೊಂಡು ನಿದ್ದೆ ಗೆಟ್ಟು, ಈ ಕಾವಿ ಬಟ್ಟೆಯನ್ನು ಉಟ್ಟು, ಕಷ್ಟ ನಿಷ್ಟುರಗಳನ್ನು ಸಹಿಸಿ ಕೊಂಡು ಆ ಮುದಿ ಕಾಡು ಮನುಷ್ಯರ ಸೇವೆ ಮಾಡಿ ಮಾಡಿ ಸವೆದು ಚಿಪ್ಪಾಗಿ ಗೋಪ್ಯದಿಂದ ಅವರ ಗ.ಟ್ರನ್ನು ಕಂಡು ಹಿಡಿದು ಕಾಲಕ್ಕೆ ಸರಿಯಾಗಿ ತಿಳಿಸಿದ್ದಕ್ಕೆ ಫಲವೇನಾಯಿತು ? ನಾನು ಪಟ್ಟ ಕಷ್ಟವೆಲ್ಲವೂ ನೀರಿನಲ್ಲಿ ಮಾಡಿದ ಹೋಮದಂತಾಯಿತು. ವ್ಯರ್ಥವಾಗಿ ನೀನು ನನಗೆ ದುರಾಶೆಹುಟ್ಟಿಸಿ ಈ ಪರಿ ಕಷ್ಟಕ್ಕೆ ಗುರಿಮಾಡಿದ್ದಕ್ಕೆ ನಾನು ನಿನ್ನ ಮೇಲೆ ಕೋಪಿಸಿಕೊಳ್ಳಬೇಕಾದುದು ನ್ಯಾಯವಾಗಿದೆ. ಬಡ ವನಕೋಪ ದವಡೆಗೆ ಊನವೆಂಬುದು ನನಗೆ ಗೊತ್ತಿಲ್ಲದಿದ್ದರೆ ಕೋಪಿಸಿ ಕೊಳ್ಳುತ್ತಿದ್ದೆನೋ ಏನೋ ? ಅಂದು ರಾತ್ರಿ ನಾನು ದುರ್ಗಕ್ಕೆ ಬಂದು ಕುಶನಾಭರು ಆದಿತ್ಯವರ್ಮಸಿಗೆ ನನ್ನ ಕೈಲಿ ಬರೆದು ಕಳುಹಿಸಿ ಕೊಟ್ಟಿದ್ದ ಗುಟ್ಟಾದಕಾಗದದ ಅಭಿಪ್ರಾಯವನ್ನು ನಿನಗೆ ಉಂಟಾಗಿಮಾಡಿದಾಗ ನೀನು ಹೇಳಿದುದೇನು ? " ನಾನು ಒಂದು ನಿಮಿಷದಲ್ಲಿ ಆದಿತ್ಯವರ್ಮ ನನ್ನೂ, ಇವನ ಹಿಂಬಾಲಕರನ್ನೂ ಕೈಸೆರೆ ಹಿಡಿದು ಅವರಲ್ಲಿದ್ದ ಜಾತಕ ವನ್ನೂ ಅವರ ಉಡುಗೆ ತೊಡಿಗೆಗ ಸಿ ಕಿತ್ತುಕೊಂಡು ಅವರ ವೇಷದಿಂದ ಕುಶನಾಭರನನ್ನು ಮೋಸಗೊಳಿಸಿ ಜಗನ್ನೊಹಿನಿಯನ್ನೂ,