ವಿಷಯಕ್ಕೆ ಹೋಗು

ಪುಟ:ಜಗನ್ಮೋಹಿನಿ .djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೨ ಜಗನ್ನೋಹಿನಿ. MMMMMMMM ಭೈರವಾನನ್ದ-ಬಾವಾ, ನಾನು ಈಕೆಲಸವು ಸುಸಾಧ್ಯವೆಂದು ತಿಳಿದು ಬುದ್ಧಿಯಿಲ್ಲದೇ ಇದನ್ನು ನಮ್ಮ ಪಾರಪತ್ಯಗಾರನಿಗೆ ವಹಿಸಿದೆನು. ಆ ಮುಟ್ಠಾಳನು ಕಾರ್ಯವನ್ನು ಹಾಳುಮಾಡಿಬಿಟ್ಟನು. ಬೈರಾಗಿ:--ಅದು ಹೇಗೆ? ಭೈರವಾನನ್ದ :-ಆ ಹಾಳಾದ ಕಥೆಯನ್ನು ಹೇಳುವುದಕ್ಕೆ ನನ ಗೀಗ ಮನಬರುವುದಿಲ್ಲ, ಆದುದರಿಂದ ಆ ವಿಷಯವು ಹಾಗಿರಲಿ, ನನ್ನ ಮನಸ್ಸಿಗೆ ಸಮಾಧಾನ ಉಂಟಾದ ಬಳಿಕ ಅದನ್ನೆಲ್ಲಾ ನಿನಗೆ ವಿವರ ವಾಗಿ ಹೇಳುವೆನು, ಸದ್ಯಕ್ಕೆ ಕೆಟ್ಟು ಹೋದ ಕಾರ್ಯವನ್ನು ನೆಟ್ಟಗೆ ಮಾಡಿಕೊಳ್ಳುವ ಪ್ರಯತವನ್ನು ಮಾಡುವ, ಅದು ಕಾರಣ ಅಲ್ಲಿನ ಸ್ಥಿತಿ ಹೇಗಿದೆ ಮುಂಚೆ ಹೇಳು. ಭೈರಾಗಿ:-ಈಕಾರ್ಯಕ್ಕೆ ನಮಗೆ ದೇವರೇ ಸಹಾಯಮಾ ಡುತ್ತಿರುವನ್ನಿದೆ. ಭೈರವಾನನ್ಗ:-ಅದು ಹೇಗೆ ? ಅದು ಹೇಗೆ? ಬೈರಾಗಿ:-ಆ ರಾಜಕುಮಾರನು ವಿವಾಹಮಾಡಿಕೊಳ್ಳುವು ದಕ್ಕೆ ಒಪ್ಪಲಿಲ್ಲ. ಭೈರವಾನನ್ಗ:-ಇದೇನು ಸೋಜಿಗವಾಗಿದೆ, ಕಾರಣವೇನು ? - ಬೈರಾಗಿ:-ಅವನು ಭೀಷನಂತೆ ಬ್ರಹ್ಮಚಾರಿಯಾಗಿರು ತಾನನ್ತಿ, ಭೈರವಾನನ್ದ:-ಓಹೋ ! ಹಾಗಾದರೆ ನಮ್ಮ ರೊಟ್ಟಿಯು ತುಪ್ಪದಲ್ಲಿ ಬಿದ್ದಿತು. ಅದಕ್ಕೆ ಕುಶನಾಭರು ಏನನ್ನೂರು ? ಭೈರಾಗಿ:-ತಮ್ಮ ಮಾತಿಗೆ ಬದಲು ಹೇಳಿದ್ದರಿಂದ ಅವರು ನಕಲಿ ಆ ಪ್ರಸ್ತಾಪವನ್ನೇ ಬಿಟ್ಟುಬಿಟ್ಟರು.