ಪುಟ:ಜಗನ್ಮೋಹಿನಿ .djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಪ್ಪಾ ರ್ಥನಿರ್ಣಯ. ೧೨೫ shhhh// \r\r\NANA ANNANNNA/\n\r ಎಂತಹ ನಾಸ್ತಿಕರಿಗಾದರೂ ಆಸ್ತಿ ಕ್ಯ ಬುದ್ದಿಯುಂಟಾಗದೇ ಇರದು ಸಮುದ್ರ ಮಧ್ಯದಲ್ಲಿ, ಒಂದು ಕಡೆ ಬಡಬಾಗ್ನಿ ಯ ಶಿಖೆಯೋ, ಜ್ವಾಲಾ ಮುಖಿಯೋ ಎನ್ನನೆ ಉದಯೋನ್ಮುಖನಾದ ಸೂರ್ಯನು ಕಾಣು ತಿದ್ದು, ಮತ್ತೊನ್ನು ಕಡೆ, ಅನ್ತೋನ್ಮುಖನಾದ ಚಂದ್ರನು ಕದ್ದಿ, ಕು, ಕಳೆಗೆಟ್ಟು ತರಂಗಗಳಮೇಲೆ ನೊರೆಯಂತೆ ತೇಲಾಡುತ್ತಿದ್ದನು. ಸಮುದ್ರದಿನ ಏಳುತ್ತಿದ್ದ ಆವಿಯು ಧೂಮಸ್ತೋಮದ ಆಕಾಶ ವನ್ನು ಆವರಿಸುತ್ತಿದಿತು. ರಾತ್ರಿ, ಸೀತ ರಶ್ಮಿಗಳ ಸಂಬಂಧದಿನ ಉಕ್ಕಿ ಹೊಕ್ಕಿ, ಸಾಕಾಗಿ ಸೌಮ್ಯವಾಗಿದ್ದ ಸಮುದ್ರದ ಅಲೆ ಗಳಮೇಲೆ ಅರುಣ ಕಿರುಣಗಳು ಆಲುತ್ತಿದ್ದುವು, ಸುತ್ತಮುತ್ತಲೂ ಹೇರಳವಾಗಿದ್ದ ಕಬ್ಬಿನ ತೋಟಗಳಲ್ಲಿ ಇಬ್ಬನಿಯಿನ್ನ ಮುಚ್ಚಲ್ಪಟ್ಟಿದ್ದ ಕಬ್ಬಿನ ಗರಿಗಳು ಪಟ್ಟಣದ ಸುತ್ತಲೂ ದಟ್ಟಯಿಸಿದ್ದ ಪದಾತಿಗಳ ಒರೆ ಗಳಚಿದಕಗಳಂತೆ ಎಳಬಿಸಿಲಿನಲ್ಲಿ ಧಳಧಳಿಸುತ್ತಿದ್ದುವು. ಅಷ್ಟು ಹೊತ್ತಿಗಾಗಲೆ ಪಟ್ಟಣದ ಪಂಚಖಾತೆಯವರು ರಾಜಬೀ ದಿಗಳನ್ನೆಲ್ಲಾ ಚೊಕ್ಕಟವಾಗಿ ಗುಡಿಸಿ ಧೂಳೂರುವಂತೆ ನೀರು ಚಲ್ಲಿಸುತ್ತಿ ದ್ದರು. ಪೌಠನಾರಿಯರು ತಮ್ಮ ತಮ್ಮ ಮನೆಗಳ ಬಾಗಿಲುಗಳ ಮುಂ ದುಗಡೆ ಸೆಗಣಿನೀರು ಚಲ್ಲಿ ಸಾರಿಸಿ ವಿಚಿತ್ರ ಕರವಾದ ರಂಗವಲ್ಲಿಗಳನ್ನು ಹಾಕುತ್ತಿದ್ದರು, ಪ್ರಯಾಣಿಕರ ಟಪ್ಪಾಲುಗಾಡಿಗಳು ಅಲ್ಲಲ್ಲಿ ಧಡ ಧಡನೆ ಓಡಾಡುತ್ತಿದ್ದುವು. ಅರಮನೆಯಲ್ಲಿ ಹಗಲು ಚಾಕರಿಯ ಆಳುಗಳು ಆಗಲೇ ಬಂದು ಕಿಟಕಿಗಳ ಬಾಗಿಲುಗಳನ್ನು ತೆಗದು ಕನ್ನಡಿಯ ಕದಗಳ ಮೇಲಣ ಧೂಳಿಯನ್ನು ಕರವಸ್ತ್ರಗಳಿಂದ ಒರಿಸುತ್ತಿದ್ದರು. ಮಹಾದ್ವಾರದ ಮುಂದುಗಡೆಯ ಉದ್ಯಾನದಲ್ಲಿ ಮಾಲಿಗಳು ಚಿತ್ರವಿಚಿತ್ರಗಳಾದ ನಾನಾ