ಪುಟ:ಜಗನ್ಮೋಹಿನಿ .djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಪ್ರಾರ್ಥನಿರ್ಣಯ, ود

  1. \\r\n\\\

PSAnMrwxrwx MMMM ಣಿಯು ಇನ್ನು ಬೆಳಗಿನ ಜಾವದಿಂದ ಒಂದು ಮಾದರಿಯಾಗಿದಾಳೆ. ಆದುದರಿಂದ, ನಮಗೆ ಒಂದೂ ತೋಚದೆ ಕೈಕಾಲಾಡುವುದಿಲ್ಲ. ಪರಿಚಾರಿಕೆಯರಲ್ಲಿ ಒಬ್ಬಳು, ಒಂದು ಮಾದರಿಯಂದರೇನು ? ಜ್ವರವೋ ? ಚಳಿಯೋ ? ಮಂದಾರಿಕೆ-ಅಯ್ಯೋ ! ಜ್ವರವೂ ಇಲ್ಲ ; ಚಳಿಯೂ ಇಲ್ಲ; ಸರ್ವಸಾಧಾರಣವಾಗಿ ಜ್ವರ ಚಳಿ ಬಂದಿದ್ದರೆ, ಇಷ್ಟು ಕಳವಳ ಪದ ಬೇಕೇ ? ಕೂತಕಡೆ ಕೂಡದೆ ನಿಂತಕಡೆ ನಿಲ್ಲದೆ ಹುಚ್ಚು ಹಿಡಿದವಳಂತೆ ಹಲುಬಿಕೊಳ್ಳುತ್ತಾ ಕಣ್ಣು ಮುಚ್ಚಾಟದ ಹುಡುಗಿಯಂತೆ ಮನೆಮೂರು ಸುತ್ತಲೂ ಹುಡುಕಾಡಿ ಕಕ್ಕಾಬಿಕ್ಕಿಯಾಗಿ ದಿಕ್ಕುಗಳನ್ನು ನೋಡಿ ಸೂ ಯ್ಯಲದಸೂನಿ ಮರಳಿ ಮಂಚದಮೇಲೇರಿ ಕುಳಿತು ಕಣ್ಣೀರನ್ನು ಕಾಲು ವೆಯಾಗಿ ಸುರಿಸುವಳು. ಒಂದೊಂದು ವೇಳೆ ಇದ್ದವಳು ಇದ್ದ ಹಾ ಗೆಯೇ ಎದ್ದು ಹೋಗಿ ಸುತ್ತಮುತ್ತಲ ಕಿಟಕಿಗಳನ್ನು ತೆಗೆದು ಅತ್ತಿತ್ತ ತೊಂಗಿನೋಡಿ ತಟ್ಟನೆ ಹಿಂದಿರುಗಿ ಅಲ್ಲಿದ್ದ ದಾಸಿಯರನ್ನು ಕುರಿತು “ ಎಲೇ, ರಾತ್ರಿ ನೀವೆಲ್ಲರೂ ಎಲ್ಲಿದ್ದೀರಿ ? ನಾನು ಹೋಗಿದ್ದುದೆಲ್ಲಿಗೆ ? ಇಲ್ಲಿಗೆ ಬಂದಿದ್ದವರಾರು ? ಇಲ್ಲಿದ್ದ ಮಂಜಿಕೆಯೆಲ್ಲಿ ? ಇಲ್ಲಿ ರಾತ್ರಿ ಮತ್ತಾರು ಮಲಗಿದ್ದರು ” ಎಂದು ಉತ್ತರಕ್ಕೆ ಕಿವಿಗೊಡದೇ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಮಾಡುವಳು, ಅರಾದರೂ ಧೈರಗೊಂಡು ಉತ್ತರ ವನ್ನು ಒತ್ತಿ ಹೇಳಿದರೆ ಅವರನ್ನು ಕಡುಕೋಪದಿಂದ,'ಛೇ! ಛೇ!! ತಿಳಿಗೇಡಿ. ಪ್ರತ್ಯಕ್ಷಾ ಪಲಾಪವನ್ನು ಮಾಡುತ್ತಾ ನನ್ನಿ ದಿರಿಗೆ ನಿಲ್ಲಬೇಡ ನಡೆ, !: ಎಂದು ಗದರಿಸುವಳು. ಏನೋ ದೈವಯೋಗದಿಂದ ಈಗತಾನೆ ಕೊಂಚ ಶಾನ್ಯಮನಸ್ಕಳಾಗಿ ನನ್ನನ್ನು ಎನಿನಂತೆ ಕೂಗಿ, “ಎಳ್ಳಿ, ಚಿತ್ರ ಲೇಖೆಯನ್ನು ಜಾಗ್ರತೆಯಾಗಿ ಕರೆಯ ಕಳುಹಿಸು ” ಎನ್ನು ಬೆಸಸಿ ದಳು, ಆದುದರಿಂದಲೇ ನಾನಿಷ್ಟು ಆತುರಪಡುತ್ತಿರುವೆನು.