ಪುಟ:ಜಗನ್ಮೋಹಿನಿ .djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಪ್ರಾರ್ಥನಿರ್ಣಯ. ೧೨೯ \r\/y ಡಕ್ಕೆ ಇರುವೆ ಮುತ್ತುವುದೆಲ್ಲಾದರೂ ಉಂಟೆ ? ತಪೋನಿಷ್ಟಳಾದ ಖುಷಿ ಕುಮಾರಿಯ ಗಾಳಿಗೆ ಯಾವ ಗೃಹತಾನೆ ನಿಂತೀತು ? ಅವರು ಈ ರೀತಿಯಾಗಿ ಮಾತನಾಡಿಕೊಳ್ಳುತ್ತಿರುವಾಗ ಗಾಡಿಯ ಕುದುರೆಗಳ ಖುರಪುಟದ ಶಬ್ದವು ಕೇಳಬನ್ನಿ ತು. ಅದನ್ನು ಅವರು ಆಲಿಸಿ, “ಚಿತ್ರಲೇಖೆಯು ಆಗಲೇಬನ್ನು ಬಿಟ್ಟ ಹಾಗಿದೆ. ಎನ್ನು ಪ್ರಾಕಾರದ ಬಾಗಿಲಕಡೆಗೆ ನೋಡುವಷ್ಟರಲ್ಲಿ, ನಾಲ್ಕು ಕುದುರೆಯ ಗಾಡಿಯೊಂದು ಅರಮನೆಯ ಮು.ಮಂಟಪದೊಳಕ್ಕೆ ಅತಿವೇಗದಿಂದ ಬಂನ್ನು ನಿಂತಿತು. - ಕೂಡಲೇ ಪಡಸಾಲೆಯಲ್ಲಿದ್ದ ದೌವಾರಿಕರು ಆ ಗಾಡಿಯ ಬಾಗಿ ಲನ್ನು ತೆಗೆದರು, ಒಡನೆಯೇ ಚಿತ್ರಲೇಖೆಯು ಗಾಡಿಯಿಂದ ಕೆಳಕ್ಕೆ ಇಳದು ಸಡಗರದಿಂದ ನೆಟ್ಟಗೆ ಉಪ್ಪರಿಗೆಯ ಸೋಪಾನಗಳನ್ನು ಹತ್ತಿ ಹೊರಟಳು. ಅಲ್ಲಿ ಮಹಾರಾಣಿಯ ಶಯ್ಯಾಗೃಹದ ಬಾಗಿಲಲ್ಲಿದ್ದ ದಾಸಿಯು ಚಿತ್ರಲೇಖೆಯ ಮೊಗವನ್ನು ನೋಡಿದಕೂಡಲೇ ಅವಳ ಆಗಮರವನ್ನು, ಯಥಾವಿಧಿಯಗಿ ಮಹಾರಾಣಿಗೆ ಅರಿಕೆಮಾಡಲು ಒಳಕ್ಕೆ ಹೋದಳು. ಚಿತ್ರಲೇಖೆಯು ಅಪ್ಪಣೆಯನ್ನು ನಿರೀಕ್ಷಿಸದೇ ನೆಟ್ಟಗೆ ಒಳಕ್ಕೆ ಹೋದಳು. ಆ ಸಮಯದಲ್ಲಿ ಜಗನ್ನೋಹಿನಿಯು ಮಣಿಮಯಮಂಚದ ಮೇಲೆಕಾಲಿಳಿಬಿಟ್ಟು ಕೊಂಡು ಕೂತುಕೊಂಡಹಾಗೆಯೇ ಮಂಚದಮೇಲಿನ ಒರಗುದಿಂಬಿನಮೇಲೆ ಮುಖವನ್ನಿಟ್ಟು ಒರಗಿಕೊಂಡು ನಿದ್ರೆ ಹತ್ತಿದವಳಂತೆ ಮೈಮರೆತಿದ್ದಳು. ಅಯ್ಯಾಯಮಾನವಾದ ಗುಂಗುರು ಕೂದಲಿನಿಂದ ಮಚ್ಚಲ್ಪಟ್ಟಿದ್ದ ಈಕೆಯ ಮಖಮಂಡಲವು ಚದರಿದ ಕಾರ್ಮುಗಿಲಿನಿಂದ ಮುಚ್ಚಲ್ಪಟ್ಟಿದ್ದ ಚನ್ನಮಲದಂತೆ ಕಾಣುತ್ತಿದ್ದಿತು. 12