ಪುಟ:ಜಗನ್ಮೋಹಿನಿ .djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

h೩೦ ಜಗನ್ನೋಹಿನಿ. AMMAMMAMMwww WMM ಚಿತ್ರಲೇಖೆಯು ಆಕೆಯ ಹತ್ತಿರ ಹೋಗಿ ನಿಂತು, ಚಿತ್ರಲಿಖಿತ ಪ್ರತಿಮೆಯಂತೆ ಕಾಣುತ್ತಿದ್ದ ಆಕೆಯ ಆಕಾರವನ್ನು ಎವೆಯಿಕ್ಕದೇ ಒದುನಿಮಿಷ ನೋಡುತ್ತ ನಿಂತು, ಬಳಿಕ ತಟ್ಟನೆಮುಂದರಿದು ಆ ಸುರಸು ಸ್ಟರಿಯ ಹಾರಿಹೋಗಿದ್ದ ಸೀರೆಯ ಸೆರಗನ್ನು ಸರಿಯಾಗಿ ಹೊದಿಸಿ, ಮುಖದಮೇಲೆ ಬಿದ್ದಿದ್ದ ಮುಂಗುರುಳುಗಳನ್ನು ನೇವರಿಸಿ, ಆಗಿನಕಾಲ ವನ್ನು ಅಧಿಕರಿಸಿ ಮಧುರವಾದ ಒಂದು ಗಾನವನ್ನು ಮಾಡತೊಡಗಿ ದಳು, ಅದನ್ನು ಕೇಳಿ ಮೋಹಿನಿಯು ಸಾಕಾಲದ ಕೆಂದಾವ ರೆಯನ್ನೆ ಕೆಂಪಾಗಿಯೂ, ಸಂಕುಚಿತವಾಯ ಇದ್ದ ಕಣ್ಣುಗಳನ್ನು ಬಿಟ್ಟು ಚಿತ್ರಲೇಖೆಯ ಮುಖವನ್ನು ನೋಡಿ, ತಟ್ಟನೆ ಎದ್ದು ಕುಳಿತು, ಸಿಡಿಮಿಡಿಗೊಂಡು, “ ಎಲೇ, ನೀನೀವೇಳೆಯಲ್ಲಿ ಇಲ್ಲಿಗೆ ಬಂದುದೇಕೆ ? ” ಎನ್ನು ಗದರಿಸಿ ಕೇಳಿದಳು. - ಚತುರಳಾದ ಚಿತ್ರಲೇಖೆಯು ಮುಖ ವಿಕಾರಗಳಿಂದ ಮೋಹಿ ನಿಯ ಮನೋಭಾವವನ್ನು ತಿಳಿದು, ಅವಳ ಮಾತಿಗೆ ರವೆಯಷ್ಟಾದರೂ ವಿಷಾದಸಡದೇ ಗಂಭೀರವಾಗಿ, “ಒಡತಿಯೇ, ನಾನು ನಿನ್ನ ದಾಸಿಯರಲ್ಲಿ ಒಬ್ಬಳಾಗಿದಾಗ್ಯೂ, ಅನನ್ಯ ಲಭ್ಯವಾದ ನಿನ್ನ ಮೈತ್ರಿಯ ಗೌರಕ್ಕೆ ಪಾತ್ರಳಾಗಿರುವುದರಿಂದ ಈಗಿನ ನಿನ್ನ ಅವಸ್ಥೆಯಲ್ಲಿ ಯಾವಾಗಲೂ ನಿನ್ನನ್ನು ಬಿಟ್ಟು ಅಗಲದೇ ಇರುವುದಕ್ಕೆ ಬಾಧ್ಯತೆಯು ನನಗೆ ಉಂಟು. ಆದುದರಿಂದ ನನ್ನ ಸ್ವಾತಂತ್ರ್ಯವನ್ನು ನೀನು ಕ್ಷಮಿಸಬೇಕು. ” ಎಂದಳು. ಮೋಹಿನಿಯು ಇವಳ ಮಾತುಗಳನ್ನು ಕಿವಿಯಮೇಲೆ ಹಾಕಿ ಕೊಳ್ಳದೇ, ನಿಟ್ಟು, ಸುರು ಬಿಟ್ಟು, ಆಕಾಶವನ್ನು ನೋಡಿ ಕೈ ಕೈ ಮರಿದು ಕೊಳ್ಳುತ್ತಾ, “ಆಹಾ ! ಏನಿದಾಶ್ಚರ್ಯ ! ಒಂದು ನಿಮಿಷದಲ್ಲಿ ಸಮ