ಪುಟ:ಜಗನ್ಮೋಹಿನಿ .djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವ ಪ್ರಾರ್ಥನಿರ್ಣಯ. ೧೩೧ MMM \nr\\n/\\r \ N/Jv ಸ ಸ್ವವೂ ಶೂನ್ಯವಾಗಿಹೋಯಿತಲ್ಲಾ ! ಮುನೇನುಗತಿ ? ಮುಂದೇನು ಗತಿ ? " ಎಂದು ಪುನಃ ಆ ಒರಗು ದಿನ್ನಿನಮೇಲೆ ಪ್ರಜ್ಞೆ ತಪ್ಪಿದವಳಂತೆ ಬಿದ್ದಳು. ಮೋಹಿನಿಯು, ಮಂಚದಕೊನೆಗೆ ಕಾಲಿಳಿಬಿಟ್ಟು ಕೊಂಡು ಕೂತಿ ದ್ದುದರಿಂದ, ಈ ಸಮಯದಲ್ಲಿ ಚಿತ್ರಲೇಖೆಯು ಹತ್ತಿರ ಇಲ್ಲದೇಹೋಗಿ ದ್ದರೆ, ಮಂಚದಿಂದ ಕೆಳಕ್ಕೆ ಬಿದ್ದೆಹೋಗುತ್ತಿದ್ದಳು. ದೈವಯೋಗದಿನ್ನ ಆಕೆಯು ಆ ಅರುವಿಲ್ಲದ ಅವಸ್ಥೆಯಲ್ಲಿ, ಮಂಚದ ಕೊನೆಯಲ್ಲಿದ್ದ ಒರಗು ದಿಂಬಿನಮೇಲೆ ಬಿದ್ದಳು ; ಕೂಡಲೇ ಆಕೆಯ ಉತ್ತಮಾಂಗವು ಕಚ ಭಾರದಿಂದ ಕೆಳಕ್ಕೆ ಸೆಳೆಯಲ್ಪಟ್ಟು ದರಿಂದ ಅಲ್ಲಿಂದ ಜಾರಿ ಪೂರ್ವ ಕಾಯ ದೊಂದಿಗೆ ಅಧೋಮುಖವಾಯಿತು ; ಅಷ್ಟರಲ್ಲಿಯೇ ಚಿತ್ರಲೇಖೆಯು ಆ ಸುಕುಮಾರಿಯನ್ನು ತನ್ನ ನಳಿತೋಳುಗಳಮೇಲೆ ಹಿಡಿದು ಮಂಚದಮೇಲೆ ಸರಿಯಾಗಿ ಮಲಗಿಸಿದಳು, ಮಂಚದ ಆಸರೆ ಅಷ್ಟು ಮಟ್ಟಿಗೆ ಇಲ್ಲದೇಹೋ ಗಿದ್ದರೆ, ಆ ವೇಳೆಯಲ್ಲಿ ಮೋಹಿನಿಯನ್ನು ಅಷ್ಟು ಸುಲಭವಾಗಿ ಎತ್ತಿ ಮಂಚದಮೇಲೆ ಮಲಗಿಸುವುದಕ್ಕೆ ಚಿತ್ರಲೇಖೆಯಿಂದ ಆಗುತ್ತಿರಲಿಲ್ಲ. ಜಗನ್ನೋಹಿನಿಯ ಮಖವು ಬೆವರಿತು ; ಬೆವರಿನ ಹನಿಗಳು ಎಳಬಿ ಸಲಿನ ಜಳದಲ್ಲಿ ವಿಕಾಸೋನ್ಮುಖವಾದ ಕೆಂದಾವರೆಯಮೇಲಣ ಹಿಮ ತುಂತುರಗಳನ್ನೆ ಕಾಣಬನ್ನುವು ; ಕೆನ್ದಾವರೆಯಂತೆ ಮನೋಹರವಾ ಗಿದ್ದ ಆಕೆಯ ಮುಖಕಾಂತಿಯು ಒಮ್ಮಿತ್ತೊಮ್ಮೆ ಬಿಳಿದಾವರೆಯನ್ನು ಹೋಲಿತು, ಚಿತ್ರಲೇಖೆಯು ಮೋಹಿನಿಯ ಸ್ಥಿತಿಯನ್ನು ನೋಡಿ ಆಕೆಯ ಮುಖವನ್ನು ತನ್ನ ಸೀರೆಯ ಶರಗಿನಿಂದ ಒರಸಿ ಗಾಳಿಹಾಕುತ್ತಾ, “ಮೋಹಿನೀ, ಮೋಹಿನೀ, ಅದೇಕೆ ನೀನಿನ್ನು ಇಷ್ಟು ಹೊತ್ತಾದರೂ