ಪುಟ:ಜಗನ್ಮೋಹಿನಿ .djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೨ ಜಗನ್ನೋಹಿನಿ. 4\ \/

  1. / \ # \r\ \/ #\/\

v\r\\ \\rvvvvvvvv/ vvvvv ಸ್ನಾನಕ್ಕೆ ಏಳಲಿಲ್ಲ ? ಏಳು, ಏಳು.” ಎನ್ಗಳು, ಮೋಹಿನಿಯು ಅದನ್ನು ಕೇಳಿ ತಟ್ಟನೆ ಎದ್ದು ಕುಳಿತು, ಚಿತ್ರಲೇಖೆಯ ಮುಖವನ್ನು ನೋಡಿ, ಎಲೇ, ನೀನುಬರುವುದಕ್ಕೆ ಇಷ್ಟು ಹೊತ್ತೇಕಾಯಿತು? ' ಎಂದು ಕೇಳಿದಳು. ಚಿತ್ರಲೇಖೆ: -ರಾಜ್ಞೆಯ ಅಪ್ಪಣೆಯನ್ನು ಕೇಳಿದಕೂಡಲೇ ಹೊರತುಬಂದೆನು, ಅಷ್ಟು ತ್ವರೆಯಾಗಿ ನನ್ನನ್ನು ಕರೆಯಕಳುಹಿಸಿದ ಕಾರಣವನ್ನು ನಾನು ತಿಳಿಯಬಹುದೇ ? ಮೋಹಿನೀ: _'ಚಿತ್ರಲೇಖೆ, ಕೆಳಗೇಕೆನಿಂತಿರುವೆ ? ಮಂಚದ ಮೇಲೇರಿ ಕೂಡು ಬಾ, ” ಎಂದು ಅವಳ ಕೈ ಹಿಡಿದು ಶೆಳೆದಳು. ಚಿತ್ರಲೇಖೆ: - ಕೊಂಚ ಓರೆಯಾಗಿನಿಂತು, “ ಒಡತಿಯೇ, ನಿನ್ನ ಪಾದಪೀಠದ ಸಾನ್ನಿಧ್ಯವನ್ನು ಬಿಟ್ಟರೆ, ಈ ನಿನ್ನ ದಾಸಿಗೆ ಮತ್ತಾವದೂ ಗೌರವಕ್ಕೆಡೆಯಲ್ಲ. ಮೋಹಿನೀ:- ಚಿತ್ರಲೇಖೆಯಾಡಿದ ಮಾತು ಸಮಂಜಸವಾದು ದಲ್ಲವೆಂಬ ಭಾವವನ್ನು ವ್ಯಕ್ತಪಡಿಸುವ ಮುಗುಳುನಗೆ ನಕ್ಕು, “ಎಲೇ ನನ್ನ ಪ್ರಾಣಸಖಿಯಾದ ನೀನು ರಾಜಕೀಯ ವ್ಯವಹಾರಗಳಲ್ಲಿ ಮಾತ್ರ ನನ್ನ ವಿಷಯದಲ್ಲಿ ಇಂತಹ ತಾರತಮ್ಯಗಳಿಗೆ ಗಮನ ಕೊಟ್ಟು ನಡೆದುಕೊಳ್ಳಬೇಕಲ್ಲದೇ ಏಕಾಂತದಲ್ಲಿ ನನ್ನನ್ನು ನೀನು ಸಹೋದರಿ ಯಂತೆ ಭಾವಿಸಬೇಕೆಂದು ನಾನು ನಿನಗೆ ಅನೇಕ ಸಂದರ್ಭಗಳಲ್ಲಿ ಹೇಳಿ ದ್ದಾಗ ನೀನೇಕೆ ಇಷ್ಟು ಸಂಕೋಚಪಡುತ್ತಿರುವೆ? ಇಂತಹ ಸಂದರ್ಭ ದಲ್ಲಿಯೂ ನೀನು ನಿನ್ನ ಮರ್ಯಾದೆಯನ್ನು ರವಷ್ಟಾದರೂ ನ ಯುವುದಿಲ್ಲವಲ್ಲಾ ! ನಿನ್ನ ರಾಜಭಕ್ತಿಯು ಅಸಾಧಾರಣ ವ್ದುದು ಒಳ್ಳೆಯದಿರಲಿ ; “ ನೀನೀಗ ಮಂಚದಮೇಲೇರಿ ಕುಳಿತುಕೊ