ಪುಟ:ಜಗನ್ಮೋಹಿನಿ .djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧4೪ MM. ಜಗನ್ನೋಹಿನಿ. Mn ಮುದ್ದು ಮಗುವಿನ ಮೋಹಿನಿಯು ಬಿಕ್ಕಿಬಿಕ್ಕಿ ಅತ್ತಳು, ಚಿತ್ರಲೇಖೆ ಯುಆ ದನ್ನು ಕೇಳಿ, 'ಜಗನ್ನೋಹಿನೀ, ಇನ್ನು ನೀರೀತಿಯಾಗಿ ಸಂತಾಪ ಪಡುವುದಕ್ಕೆ ಕಾರಣವೇನು ? ಮನೋಗತವಾದ ದುಃಖವು ಆಪ್ತ ಜನ ರಲ್ಲಿ ಹೇಳಲ್ಪಡುವವರೆಗೂ ವೃದ್ಧಿಯನ್ನು ಹೊನ್ಸಿ ಕೊನೆಗೆ ಬುದ್ಧಿಯನ್ನು ಕೆಡಿಸುವುದು. ಆದುದರಿಂದ ನೀನಿನ್ನು ತಡಮಾಡದೇ ನಿನ್ನ ಮನೋಗ ತವನ್ನು ನನ್ನೊಡನೆಹೇಳು, ” ಎನ್ಗಳು. ಆಗ ರಾಣಿಯು ಎದ್ದು ಕುಳಿತು ತನ್ನ ಶರಗಿನಿನ್ನ ಕಣ್ಣುಗಳನ್ನು ಒರಸಿಕೊಂಡು ಬಾಗಿಲಹತ್ತಿರ ನಿಂತಿದ್ದ ದಾಸಿಯರನ್ನು ನೋಡಿ “ಎಲೇ, ಬಾಗಿಲನ್ನು ಮುಚ್ಚಿಕೊಂಡು ನೀವೆಲ್ಲರೂ ಕೊಂಚ ಹೊತ್ತು ಹೊರಗೆ ನಿಂತಿರಿ, ” ಎಂದಳು. ಕೂಡಲೇ, ಅಲ್ಲಿ ಕಿಟಕಿಯ ಕದಗಳ ಮರೆಯಲ್ಲಿಯ ಬಾಗಿಲು ಗಳ ಮರೆಯಲ್ಲಿಯ ಸದ್ದು ಮಾಡದೇ ನಿಂತಿದ್ದ ದಾಸಿಯರೆಲ್ಲರೂ ಒಬ್ಬೊಬ್ಬರಾಗಿ ಹೊರಹೊರಟರು. ಬಾಗಿಲುಗಳು ಮುಚ್ಚಲ್ಪಟ್ಟುವು' - ಆಗ ಜಗನ್ನೋಹಿನಿಯು ಚಿತ್ರಲೇಖೆಯ ಹೆಗಲಮೇಲೆ ಕೈ ಯಿಟ್ಟು, “ ಎಲೇ, ಚಿತ್ರಲೇಖೇ, ನಿನಗಿಂತಲೂ ನನಗೆ ಆಪ್ತರ ಮತ್ತಾರೂ ಇಲ್ಲ ; ಆದರೂ ನಿನ್ನಲ್ಲಿಯೂ ಕೂಡ ನನ್ನ ಮನೋಗತ ವನ್ನು ಒಡೆದುಹೇಳಲು ನನಗೆ ಮನಬಾರದು ; ಹೇಳದೆಇದ್ದರೆ ಯತ್ನ ವಿಲ್ಲ ; ಏನು ಮಾಡಲಿ ? ಹೇಗೆ ಸಹಿಸಲಿ ? ಒಳ್ಳೆಯದು ! ಏನಾ ದರೂ ಆಗಲಿ ; ನಾಚಿಕೆಯನ್ನು ಬಿಟ್ಟು ನಿನ್ನೊಡನೆ ಇದ್ದ ಸಂಗತಿಯನ್ನು ಹೇಳುವೆನು ಕೇಳು, ನಿನ್ನೆಯ ರಾತ್ರಿ ಬೆಳಗಿನ ಜಾವದಲ್ಲಿ, ಈ ನನ್ನ ಮಂಚದ ಇದಿರಿನಲ್ಲಿ ಆದರಂತಹ ಮತ್ತೊಂದು ಮಂಚವಿದ್ದಿತು : ಅದರ ಮೇಲಣ ಹಾಸಿಗೆ, ಹೊದಿಗೆ, ಪರದೆ ಮೊದಲಾದುವು ನನ್ನ ಮಂಚದಲ್ಲಿ