ಪುಟ:ಜಗನ್ಮೋಹಿನಿ .djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಪ್ರಾರ್ಥನಿರ್ಣಯ. ೧೩೫. Anr\nhn/\r\nt \nnnnnr MM ಇರುವಂಥಾವುಗಳ ಹಾಗೆಯೇ ಇದ್ದುವು. ಆ ಮಂಚದಮೇಲೆ,-ನಾನು ಏನೆಂದು ಹೇಳಲಿ ! ಮನ್ಮಧಕೋಟಿ ಸೌಂದರ್ಯಶಾಲಿಯಾದ ವ ನಸ್ಥನೊಬ್ಬನು ಮಲಗಿ ಸುಖನಿದ್ರೆ ಮಾಡುತ್ತಿದ್ದನು. ಆತನ ರೂಪ ಲಾವಣ್ಯಗಳನ್ನು ಯಾವ ಭಾಷೆಯ ಬಣ್ಣಿಸಲಾರದು ಯಾವ ಮಹಾ ಕವಿಯೂ ಅವನನ್ನು ಅತಿಶಯೋಕ್ತಿಯಿಂದ ವರ್ಣಿಸಲಾರನು ; ಅದೇತಕ್ಕೆಂದರೆ, ಆತನ ವರ್ಣನೆಯ ವಿಷಯದಲ್ಲಿ ಅತಿಶಯೋಕ್ತಿಗಳೆ ಇವೂ ಸ್ವಭಾವೋಕ್ತಿಯ ಮೇರೆಯನ್ನು ಮಾರಿ ರೇಖಾವಾತ್ರವಾದರೂ ಮುಂದರಿಯಲಾರವು, ಆತನನ್ನು ನೋಡಿದಕೂಡಲೆ ನನ್ನ ಮನವು ಮದಿಸಿದ ಆನೆಯಂತೆ ನಿರಂಕುಶವಾಗಿ ಪ್ರವರ್ತಿಸಿತು, ಆಪರಿಯಿಂದ ಚದರಿದ್ದ ನನ್ನ ಮನವನ್ನು ನ ನು ನಿಗ್ರಹಿಸಿಕೊಳ್ಳಲು ಸಾಹಸಪಡುತ್ತಿ ರುವಾಗ ಆ ಮೋಹನಾಂಗನು ನನ್ನ ಮನವನ್ನು ಸೂರೆಗೊಂಡು ಎತ್ತಲೋ ಮಾಯವಾದನು. ಆತನು ಈ ಪಾಪಿ ಕಣ್ಣಿಗೆ ಅದೃಶ್ಯನಾ ದುದು ಮೊದಲು ನನ್ನ ಮನದಲ್ಲಿ ಅನಿರ್ವಾಚ್ಯವಾದ ಕುತೂಹಲವು ತಲೆದೋರಿ ಕ್ಷಣೇಕ್ಷಣೇ ವೃದ್ಧಿಯ ಗುತ್ತಲೇ ಇದೆ, ಆತನು ಮಲಗಿದ್ದ ಆ ಮಂಚವೆತ್ತಣದೊ ? ಆತನಾರೋ ? ಆ ಮಂಚವೀಗ ಎಲ್ಲಿಹೋಯಿ ತೋ ? ಆ ಭುವನಮೋಹನ ನೆಪೋದನೊ ? ಇದೇನು ಮಾಯೆಯೋ ? ಮನೋಮೋಹವೋ ? ಇಂದ್ರಜಾವೋ ? ಸ್ವಪ್ನ ವೋ ? ನಾನರಿಯೆ. ಏನಾದರೂ ಆಗಲಿ : ಆ ದಿವ್ಯಪುರುಷನ ತೇಜೋಮಯವಾದ ಬಿಟ್ಟವು ನನ್ನ ಕಣ್ಣಿಗೆ ಕಟ್ಟಿದಹಾಗಿದೆ. ಆತನಿಲ್ಲದ ಈ ಭವನವು ನನ್ನ ಕಣ್ಣಿಗೆ ಭಯಂಕರವಾದ ಅರಣ್ಯದಂತೆ ಕಾಣುತ್ತಿದೆ. ಆತನನ್ನು ನೋಡಿ ಮಾತಾ ಡುವವರೆಗೂ ನನ್ನ ಮನವು ಸಮಾಧಾನವನ್ನು ಹೊಂದುವುದಿಲ್ಲ, ಇದಕ್ಕೆ ಏನುಮಾಡಲಿ ? ಎಂದಳು.