ಪುಟ:ಜಗನ್ಮೋಹಿನಿ .djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ಲೆ ಜಗನ್ನೋಹಿನಿ ಅದಕ್ಕೆ ನಾನು, ಯಾರಾಹುಡುಗಿ ? ಇದೇನು ಹೀಗೆ ನಿದ್ರೆಗಣ್ಣಿನಲ್ಲಿ ಅಸಮೃದ್ದ ವಾಗಿ ಮಾತನಾಡುತ್ತಿರುವೆ ? ನೀನೇನು ಸ್ವಷ್ಟವನ್ನು ಕಂಡೆಯೋ ? ” ಎನ್ನು ಕೇಳಿದೆನು, ಅದಕ್ಕವಳು, “ಏಳನೆಯ ಪ್ರಾಕಾರದ ಬೀದಿಯಲ್ಲಿರುವ ಚಂನ್ಲೈಸೇಖರರಾಯನ ಮನೆಯಲ್ಲಿ ಆತನ ಮಗಳ ಮದುವೆಯಾಯಿತು, ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಭಾರಿ ವಿವಾಹ ಮಂಟಪವನ್ನು ಕಟ್ಟಿಸಿದ್ದನು; ಬಹಳ ವೈಭವ ದಿನೇ ಮದುವೆಯಾಯಿತು ; ಸಾವಿರಾರು ಜನ ಬಂಧು ಮಿತ್ರರು ಸೇರಿ ದ್ದರು ; ನಿನ್ನೆ ನಾಕಬಲಿಯಾಯಿತು ; ರಾತ್ರಿ ಇನ್ನೂ ಅರ್ತಿಅಕ್ಷತೆ, ಹಾಡುಹಸೆ, ನಡೆಯುತ್ತಿರುವಾಗಲೇ, ಆ ಮಂಟಪಕ್ಕೆ ಅಕಸ್ಮಾತ್ತಾಗಿ ಬೆಂಕಿಬಿದ್ದು ಹೋಯಿತು; ಅದನ್ನು ಆರಿಸಬೇಕೆಂದು ಕೇರಿಯಜನರೆಲ್ಲರೂ ಸೇರಿ ಎಷ್ಟೊ ಸಾಹಸಪಟ್ಟರು; ಏನೂ ಪ್ರಯೋಜನವಾಗಲಿಲ್ಲ, ಅಯ್ಯೋ! ಮದವಣಿಗನು ಅದರೊಳಗೆಸಿಕ್ಕಿ ಸುಟ್ಟು ಬೂದಿಯಾಗಿಹೋದನು. ದೇವರ ದಯದಿಂದ ಮತ್ತಾರಿಗೂ ಏನೂ ಅಪಾಯವಾಗಲಿಲ್ಲ, ಕೋಟ್ಯಾಂತರ ರೂಪಾಯಿಗಳ ಸಾಮಾನೂ, ಸರಂಜಾಮುಗಳೂ ಸುಟ್ಟು ಹೋದವು. ಯಾವುದುಹೋದರೂ ಏನೂ ಚಿಂತೆಯಿಲ್ಲ ; ವರನುಹೋದುದೀಗ ಬಹಳ ಶೋಚನೀಯವಾಗಿದೆ.” ಎಂದಳು. ಅದಕ್ಕೆ ನಾನು “ ಶಾನ್ತಂಪಾಪಮ್! ಶಾನ್ತಂಪಾಪಮ್ !! ಛೇ ! ಛೇ !! ಅವರ ಮನೆಯಲ್ಲಿ ಮದುವೆ ಎಲ್ಲಾ ಯಿತು ? ನಾಳೆ ಮಾಘ ಶದ್ದದಲ್ಲಿ ಮದುವೆಮಾಡಬೇಕೆಂದು ಯೋಚಿಸಿ ಕೊಂಡಿರುವರು. ಏಳು ! ಏಳು !! ನಿನಗೆ ಸ್ವಪ್ನವಾಯಿತು.” ಎಂದೆನು. ಅದಕ್ಕೆ ಆ ಮುದುಕಿಯು ಮುಸುಗುತೆಗೆದುನೋಡಿ “ ಅಯ್ಯೋ! ನಾನೆಂತ ಹಕೆಟ್ಟಸ್ವಪ್ನವನ್ನು ಕಂಡೆನು ! ಆ ಉತ್ಪಾತವನ್ನು ಈಗ ತಾನೆ ಪ್ರತ್ಯಕ್ಷ ವಾಗಿ ನೋಡಿಬಂದಹಾಗಿದೆಯಲ್ಲಾ!” ಎಂದು ನನ್ನನ್ನು ಕೂಗಿ ಹೊತ್ತೆ