ಪುಟ:ಜಗನ್ಮೋಹಿನಿ .djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೦ ಸ್ವಪ್ಪಾ ರ್ಥನಿರ್ಣಯ. ಜ್ಞಾನವೃದ್ಧರಾಗಿಯೂ, ವಯೋವೃದ್ಧರಾಗಿಯೂ ಇರುವವರಿಂದ ತಿಳಿದು ಕೊಳ್ಳಬೇಕು; ಏಕೆಂದರೆ, ಪ್ರಾಯಶಃ ಸ್ವಪ್ನಗಳು ಸಾಂಕೇತತಗಳಾ ಗಿಯೇ ಇರುವುವು, ಆ ಸಂಕೇತಗಳಿಗೆ ಸರಿಯಾದ ಅರ್ಥವನ್ನು ಹೇಳ ಬೇಕಾದರೆ, ಬಹಳ ಅನುಭವವಿರಬೇಕು, ಅದು ಹೇಗೆಂದರೆ, ಸ್ವಪ್ನದಲ್ಲಿ ಸರ್ಪವು ದ್ರವ್ಯಲಾಭಸೂಚಕವೆಂತಲೂ, ಮರಣವು ಆರೋಗ್ಯಸೂಚಕ ವೆಂತಲೂ, ಕುದುರೆ, ಗಾಡಿ ಮುಂತಾದುವುಗಳು ಮರಣಸೂಚಕ ವೆಂತಲೂ ಹೀಗೆಯೇ ಅನೇಕ ಪದಾರ್ಥಗಳು ಅನೇಕ ವಿಷಯಗಳನ್ನು ಸೂಚಿಸುತ್ತವೆ ಎಂದು ಹಿರಿಯರು ಹೇಳುತ್ತಾರೆ. ಆದರೆ, ಈ ನಿನ್ನ ಸ್ವಪ್ನವು ಅಂತಹ ಗೂಢವಾದುದಲ್ಲ; ಬಹು ಸ್ಪಷ್ಟವಾಗಿದೆ. ಅದರ ಅರ್ಥವನ್ನು ನಾನೇ ದೃಢವಾಗಿ ಹೇಳುವೆನು ಕೇಳು, ನೀನು ಸ್ವಪ್ನದಲ್ಲಿ ಕಂಡ ಆ ಮಹಾಪುರುಷನು ನನ್ನ ಭಾವಮಹಾರಾಜನಲ್ಲದೇ ಬೇರೆ ಯಾರೂ ಅಲ್ಲ. ಈ ಮಾತುಗಳು ಮೋಹಿನಿಯ ಕಿವಿಯಮೇಲೆ ಬಿದ್ದ ಕೂಡಲೇ, ನಿಸ್ತೇಜವಾಗಿ ಬಾಡಿ ಬಿಳುಪಾಗಿದ್ದ ಅವಳ ಕಪೋಲಗಳು ಕೆಂಪೇರಿದುವು; ಮೊಬ್ಬಾಗಿದ್ದ, ಇವರದಳಗಳಂತೆ ಸುಂದರವಾಗಿದ್ದ ಅವಳ ಕಣ್ಣು ಗಳ ಸ್ವಾಭಾವಿಕವಾದ ಚಾಂಚಲ್ಯವು ಎಚ್ಚರಗೊಂಡಿತು; ಸುಂದರವಾದ ಅವಳ ಚಂದುಟಿಗಳ ಹಿಂದುಗಡೆ ಅಡಗಿದ್ದ ಮಂದಹಾಸದ ಛಾಯೆಯು ಕುಂದಕುದ್ಮಲಗಳಂತೆ ಅಂದವಾಗಿದ್ದ ಅವಳ ದಂತವಯ್ಕೆಯಮೇಲೆ ಪ್ರತಿ ಫಲಿತವಾಗಿದ್ದಿತು. ಮೋಹಿನಿಯು ಈ ವಿಚಾರಗಳನ್ನು ಸಿಥಿಲವಾಗಿದ್ದ ತನ್ನ ಕೇಶ ಪಾಶದಗಂಟನ್ನು ಬಿಚ್ಚಿ ಜಾಡಿಸಿ ನೇವರಿಸಿ ಮುಡಿಗಟ್ಟಿ ಕೊಳ್ಳುವುದು ನೆವದಿಂದಲೂ, ಸೀರೆಯ ಸೆರಗನ್ನು ಸರಿಮಾಡಿಕೊಳ್ಳುವ ನೆವದಿಂದಲೂ,