ಪುಟ:ಜಗನ್ಮೋಹಿನಿ .djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೨ ಸ್ವಪ್ಪಾರ್ಥನಿರ್ಣಯ. NANA, ಚಿತ್ರಲೇಖೆ:-ಮಹಾರಾಣಿಯೇ, ಮನ್ನಿಸಬೇಕು; ಲೋಕದಲ್ಲಿ ಸರ್ವರೂ ತಮತಮಗೆ ಪ್ರಿಯವಾದ ವಸ್ತುಗಳನ್ನು ಲೋಕೋತ್ತರವಾ ದುವುಗಳೆಂದು ಅಂದುಕೊಳ್ಳುವುದು ಸಾಜವಾಗಿದೆ. ಭುವನನಿರ್ಮಾಣ ಕಲಾಕೋವಿದನಾದ ವಿಧಿಯು, ಮನುಷ್ಯಯೋನಿಗಳಿಗೂ ವೈವಾಹಿಕ ಸಂಬಂಧವನ್ನು ಎಂದಿಗೂ ವಿಧಿಸುವುದಿಲ್ಲ. ಆದುದರಿಂದ ನೀನು ಸ್ವಪ್ನ ದಲ್ಲಿ ಕಂಡಾತನು ಆರೋ ನಿನಗೆ, ಅನುರೂಪನಾದ ರಾಜಕುಮಾರನಲ್ಲದೇ ಬೇರೊಬ್ಬನಾಗಿರಲಾರನೆಂದು ನನ್ನ ಅಲ್ಪಮತಿಗೆ ತೋರುತ್ತಿದೆ. ಮೋಹಿನೀ:--ಹಾಗಾದರೆ, ಆತನ ಸಮಾಗಮನವು ನನಗೆ ಆಗುವು ದೆಂದಿಗೆ? - ಚಿತ್ರಲೇಖೆ:-ಇಷ್ಟು ದಿನ ಇಲ್ಲದೇ ಇಂದು ನೀನು ಆತನನ್ನು ಸ್ವಪ್ನದಲ್ಲಿ ಕಂಡ ಕಾರಣ ನಿನಗೆ ಆತನ ಸಮಾಗಮವು ಕ್ಷಿಪ್ರದಲ್ಲಿಯೇ ಆಗುವುದೆಂದು ಸ್ಪಷ್ಟವಾಗಿತಿಳಿಯಬರುತ್ತದೆ, ಮುಂದೆ ಸಂಭವಿಸುವ ಸಂಗತಿಯ ಛಾಯೆಯು ಬಹಳ ಮುಂದಾಗಿ ಕಾಣಿಸುವುದಿಲ್ಲ. ಮೋಹಿನೀ:-ಅದುವರೆಗೂ ನಾನು ಏನು ಮಾಡಲಿ ? ಚಿತ್ರಲೇಖೆ:--ಮಹಾನುಭಾವನಾದ ಬ್ರಹ್ಮನ ಅಘಟ್ಟ ಘಟನಾ ಶಕ್ತಿಯಲ್ಲಿ ನಂಬುಗೆ ಇಟ್ಟು, ಅಭೀಷ್ಟ ಶಿದ್ದಿಯಾಗುವುದಕ್ಕೆ ಸಲುವಾಗಿ ನಿನ್ನ ಇಷ್ಟದೇವತೆಯನ್ನು ವ್ರತನಿಯಮಗಳಿಂದ ಸೇವಿಸುತ್ತಿರುವುದ ದಕ್ಕಿಂತಲೂ ಬೇರೆ ಮಾಡುವುದೇನು? ಚಿತ್ರಲೇಖೆಯ ಭಾಷಣದಕಡೆಯ ವಾಕ್ಯವುಮುಗಿಯುವುದ ರೊಳಗಾಗಿ, ಕುಡಿಯನ್ನ ಕೋಮಲವಾಗಿದ್ದ ತಾಪಸ ಕುಮಾರಿಯ ಹುಬ್ಬುಗಳು ಕೂಡಿಕೊಣ್ಣು ಹುರಿಯಾದುವು ; ಮುಖವಂಡಲವು ತನಿ ಗೆಣ್ಣದನ್ನೆ ಕೆಂಪಾದುದು ; ಚನ್ನು ಟಿಯು ಅಂದಗೆಟ್ಟು ಥರಥರನೆ ಅದ